ದೇಶ

ಬಿಜೆಪಿ ಮುಂದಿನ ಹಲವು ದಶಕಗಳ ಕಾಲ ಎಲ್ಲಿಯೂ ಹೋಗಲ್ಲ: ರಾಹುಲ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

ಬಿಜೆಪಿ ಕೇಂದ್ರ ರಾಜಕೀಯದಲ್ಲಿ ಇರಲಿದೆ. ಮುಂದಿನ ಹಲವು ದಶಕಗಳ ಕಾಲ ಅದು ಎಲ್ಲಿಯೂ ಹೋಗುವುದಿಲ್ಲ ಎಂದು ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಜೆಪಿ ಮುಂದಿನ ಹಲವು ದಶಕಗಳ ಕಾಲ ಎಲ್ಲಿಯೂ ಹೋಗಲ್ಲ: ರಾಹುಲ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ
ಪ್ರಶಾಂತ್ ಕಿಶೋರ್
Published On :

ಪಣಜಿ: ಬಿಜೆಪಿ ಕೇಂದ್ರ ರಾಜಕೀಯದಲ್ಲಿ  ಇರಲಿದೆ. ಮುಂದಿನ ಹಲವು ದಶಕಗಳ ಕಾಲ ಅದು ಎಲ್ಲಿಯೂ ಹೋಗುವುದಿಲ್ಲ ಎಂದು ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್ ಟಿಕೆಟ್ ಗಾಗಿ ಲಾಬಿ ನಡೆಸುತ್ತಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಬಿಜೆಪಿಯನ್ನು ಜನರು ಕೂಡಲೇ ಕಿತ್ತೂಗೆಯಬೇಕೆಂಬ ರಾಹುಲ್ ಗಾಂಧಿ ಚಿಂತನೆ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ಗೋವಾದಲ್ಲಿ ಖಾಸಗಿ ಸಭೆಯೊಂದರಲ್ಲಿ ಪ್ರಶಾಂತ್ ಕಿಶೋರ್ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. 

ಬಿಜೆಪಿ ಗೆಲ್ಲಲಿ ಅಥವಾ ಸೋಲಲಿ,  ಕಾಂಗ್ರೆಸ್ ಗೆ ಮೊದಲ 40 ವರ್ಷವಿದ್ದ ಹಾಗೆಯೇ ಕೇಂದ್ರ ರಾಜಕೀಯದಲ್ಲಿ  ಬಿಜೆಪಿ ಇರಲಿದ್ದು, ಅದು ಎಲ್ಲಿಯೂ ಹೋಗಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 

 ಒಂದು ಬಾರಿ ಕೇಂದ್ರ ಮಟ್ಟದಲ್ಲಿ ಶೇಕಡಾ 30 ಕ್ಕೂ ಹೆಚ್ಚು ಮತಗಳನ್ನು ಪಡೆದರೆ, ನೀವು ಅವಸರದಲ್ಲಿ ಹೋಗುವಂತದಲ್ಲ, ಆದ್ದರಿಂದ ಜನರು ಕೋಪಗೊಂಡು, ಪ್ರಧಾನಿ ಮೋದಿಯನ್ನು ಕಿತ್ತೊಗೆಯುವುದಿಲ್ಲ,  ಮೋದಿಯನ್ನು ಕಿತ್ತೊಗೆದರೂ, ಬಿಜೆಪಿ ಎಲ್ಲಿಯೂ ಹೋಗಲ್ಲ. ಅವರು ಇಲ್ಲಿಯೇ ಇರುತ್ತಾರೆ. ಮುಂದಿನ ಹಲವು ದಶಕಗಳ ಕಾಲ ಅವರೊಂದಿಗೆ ನೀವು ಹೋರಾಟ ನಡೆಸಬೇಕಾಗಿದೆ ಎಂದು ಕಿಶೋರ್ ಹೇಳಿದ್ದಾರೆ.

ರಾಹುಲ್ ಗಾಂಧಿಯನ್ನು ಉಲ್ಲೇಖಿಸಿರುವ ಪ್ರಶಾಂತ್ ಕಿಶೋರ್,  ರಾಹುಲ್ ಗಾಂಧಿಗೆ ಸಮಸ್ಯೆ ಇರುವುದೇ ಅಲ್ಲೇ. ಜನರು ಮೋದಿಯನ್ನು ಕಿತ್ತೊಗೆಯಬಹುದು ಎಂದು ಅಂದುಕೊಂಡಿದ್ದಾರೆ. ಆದರೆ, ಅದು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.