ಜನಸಾಮಾನ್ಯರಿಗೆ ಎಲ್ಪಿಜಿ ಶಾಕ್: ಮುಂದಿನ ವಾರ ಬೆಲೆ ಏರಿಕೆಯಾಗುವ ಸಾಧ್ಯತೆ
ಅಂತಾರಾಷ್ಟ್ರೀಯ ದರ ಏರಿಕೆಯ ಹಿನ್ನೆಲೆ ಪ್ರತೀ ಸಿಲಿಂಡರ್ ಮೇಲಿನ ನಷ್ಟ ಹೆಚ್ಚಾಗಿದೆ. ಹಾಗಾಗಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ನವದೆಹಲಿ: ಮುಂದಿನ ವಾರ ಅಡುಗೆ ಅನಿಲ (ಎಲ್ಪಿಜಿ) ದರ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ದರ ಹೆಚ್ಚಳವು ಸರ್ಕಾರದ ಅನುಮತಿಯ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಅ.6: ಗ್ರಾಹಕರಿಗೆ ಮತ್ತಷ್ಟು ಶಾಕ್: ಅಡುಗೆ ಅನಿಲ ಸಿಲಿಂಡರ್ ದರ 15 ರೂ. ಏರಿಕೆ; ಇಂದಿನಿಂದ ಹೊಸ ಬೆಲೆ ಜಾರಿ
ಅಂತಾರಾಷ್ಟ್ರೀಯ ದರ ಏರಿಕೆಯ ಹಿನ್ನೆಲೆ ಪ್ರತೀ ಸಿಲಿಂಡರ್ ಮೇಲಿನ ನಷ್ಟ ಹೆಚ್ಚಾಗಿದೆ. ಹಾಗಾಗಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಮತ್ತೊಮ್ಮೆ ಬೆಲೆ ಏರಿಸಿದ್ರೆ, ಇದು ಐದನೇ ಬಾರಿಗೆ ಹೆಚ್ಚಳವಾಗಲಿದೆ. ಈಗಾಗಲೇ ಅ.6ರಂದು ಪ್ರತಿ ಸಿಲಿಂಡರ್ಗೆ 15 ರೂ. ಹೆಚ್ಚಿಸಲಾಗಿದೆ.
ಇದನ್ನೂ ಓದಿ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 43 ರೂ. ಹೆಚ್ಚಳ
ಇದಲ್ಲದೇ ಜುಲೈನಲ್ಲಿ 14.2 ಕೆ ಜಿ ಸಿಲಿಂಡರ್ ದರವನ್ನು 90 ರೂ.ಗೆ ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಚಿಲ್ಲರೆ ಮಾರಾಟದ ಬೆಲೆಯನ್ನು ವೆಚ್ಚದೊಂದಿಗೆ ಹೊಂದಿಸಲು ಅನುಮತಿಸಲಾಗಿಲ್ಲ.
ಅಲ್ಲದೇ ಅಂತರವನ್ನು ಕಡಿಮೆ ಮಾಡಲು ಇದುವರೆಗೆ ಯಾವುದೇ ಸರ್ಕಾರಿ ಸಬ್ಸಿಡಿಯನ್ನು ಅನುಮೋದಿಸಲಾಗಿಲ್ಲ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳಿಂದ ಮಾಹಿತಿ ದೊರೆತಿದೆ. ಎಲ್ ಪಿ ಜಿ ಜೊತೆಗೆ ಪೆಟ್ರೋಲ್ ದೀಸೆಲ್ ದರವೂ ಮತ್ತೆ ಏರಿಕೆ ಕಾಣುವ ಸೂಚನೆ ದೊರೆತಿದೆ.
Related Article
ಎತ್ತಿನ ಗಾಡಿ ಏರಿ ವಿಧಾನ ಸೌಧಕ್ಕೆ ಕಾಂಗ್ರೆಸ್ ನಾಯಕರ ಪ್ರಯಾಣ: ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ದರ ಇಳಿಕೆಗೆ ಆಗ್ರಹ
ಕೊಡಗು: ನೋಂದಣಿಯಾಗದ ಹೋಮ್ ಸ್ಟೇ ನಲ್ಲಿ ಅನಿಲ ಸೋರಿಕೆ; ಯುವತಿ ಸಾವು
ಮಹಾರಾಷ್ಟ್ರ: ಅನಿಲ ಸೋರಿಕೆಯಿಂದ ಅಗ್ನಿ ಅವಘಡ- 5 ಮಂದಿ ಗಾಯ
ಗ್ರಾಹಕರಿಗೆ ಮತ್ತಷ್ಟು ಶಾಕ್: ಅಡುಗೆ ಅನಿಲ ಸಿಲಿಂಡರ್ ದರ 15 ರೂ. ಏರಿಕೆ; ಇಂದಿನಿಂದ ಹೊಸ ಬೆಲೆ ಜಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


