ಈ ವರ್ಷಾಂತ್ಯದೊಳಗೆ ದೇಶದೊಳಗೆ ನುಸುಳಲು ಎಲ್ ಒಸಿಯಲ್ಲಿ 250 ಉಗ್ರರು ಕಾಯುತ್ತಿದ್ದಾರೆ: ಗುಪ್ತಚರ ಮಾಹಿತಿ
ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ, ಈ ವರ್ಷಾಂತ್ಯದೊಳಗೆ ಜಮ್ಮು-ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ -ಎಲ್ ಒಸಿಯಾದ್ಯಂತ ಸುಮಾರು 250 ಉಗ್ರರು ಕಾಯುತ್ತಿರುವುದಾಗಿ ತಿಳಿದುಬಂದಿದೆ.

ನವದೆಹಲಿ: ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ, ಈ ವರ್ಷಾಂತ್ಯದೊಳಗೆ ಜಮ್ಮು-ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ -ಎಲ್ ಒಸಿಯಾದ್ಯಂತ ಸುಮಾರು 250 ಉಗ್ರರು ಕಾಯುತ್ತಿರುವುದಾಗಿ ತಿಳಿದುಬಂದಿದೆ.
ಆಗಸ್ಟ್ ತಿಂಗಳಲ್ಲಿ ಸುಮಾರು 180 ಉಗ್ರರು ಪತ್ತೆಯಾಗಿದ್ದರು. ದೇಶದೊಳಗೆ ನುಸುಳಲು ಹೊಂಚು ಹಾಕುತ್ತಿರುವ ಉಗ್ರರು ಬಹುತೇಕ ಲಷ್ಕರ್-ಇ- ತೊಯ್ಬಾ ಮತ್ತು ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.
ಫೆಬ್ರವರಿಯಲ್ಲಿ ಪಾಕಿಸ್ತಾನ- ಭಾರತ ನಡುವಣ ಕದನ ವಿರಾಮ ಒಪ್ಪಂದ ಆಗಿದ್ದರೂ, ಎಲ್ ಒಸಿಯಾದ್ಯಂತ ಅಪಾರ ಸಂಖ್ಯೆಯ ಉಗ್ರರು ಬರುತ್ತಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಗ್ಧರ್, ಭಿಂಬರ್ ಗಲಿ ಮತ್ತು ನೌಶೇರಾ ಸೆಕ್ಟರ್ ನಲ್ಲಿ ಉಗ್ರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಗರಿಷ್ಠ ಭಯೋತ್ಪಾದಕರನ್ನು ಒಳನುಸುಳಲು ಉಗ್ರ ಸಂಘಟನೆಗಳು ಹೊಸ ಮಾರ್ಗಗಳು, ನದಿಯ ಅಂತರಗಳು ಮತ್ತು ಪತ್ತೆಯಾಗದ ಸುರಂಗಗಳನ್ನು ಅನ್ವೇಷಿಸಬಹುದು ಎಂದು ಇಂಟೆಲ್ ವರದಿಗಳು ಸೂಚಿಸುತ್ತವೆ ಎಂದು ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಜಾಗರೂಕರಾಗಿದ್ದೇವೆ ಮತ್ತು ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಆದರೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದರಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ನೈತಿಕತೆ ಹೆಚ್ಚಿದೆ ಮತ್ತು ಅವರು ಭಯೋತ್ಪಾದಕರಿಗೆ ತರಬೇತಿಯನ್ನು ತೀವ್ರಗೊಳಿಸಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


