ದೇಶ

ಹವಾಯಿ ಚಪ್ಪಲಿ ಧರಿಸಿರುವವರು ವಿಮಾನದಲ್ಲಿ ಪ್ರಯಾಣಿಸುವುದಿರಲಿ, ಜನ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ!

ಇಂಧನ ದರ ದರ ತೀವ್ರ ಏರಿಕೆಯಿಂದಾಗಿ ಮಧ್ಯಮವರ್ಗದ ಜನರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ಹವಾಯಿ ಚಪ್ಪಲಿ ಧರಿಸಿರುವವರು ವಿಮಾನದಲ್ಲಿ ಪ್ರಯಾಣಿಸುವುದಿರಲಿ, ಜನ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ!
ಪ್ರಿಯಾಂಕಾ ಗಾಂಧಿ
Published On :

ನವದೆಹಲಿ : ಇಂಧನ ದರ ದರ ತೀವ್ರ ಏರಿಕೆಯಿಂದಾಗಿ ಮಧ್ಯಮವರ್ಗದ ಜನರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ. 

ಪೆಟ್ರೋಲ್, ಡೀಸೆಲ್‌ ದರ ಏರಿಕೆಯ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ,  ಹವಾಯಿ ಚಪ್ಪಲಿಯನ್ನು ಧರಿಸಿರುವವರೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಮಧ್ಯಮವರ್ಗದ ಜನರಿಗೂ ರಸ್ತೆಯಲ್ಲಿ ಚಲಿಸಲಾಗದ ಸ್ಥಿತಿಯನ್ನು ತರಲಾಗಿದೆ ಎಂದು ಟೀಕಿಸಿದ್ದಾರೆ. ವಿಮಾನಗಳಿಗೆ ಬಳಸುವ ಎಟಿಎಫ್‌ ತೈಲದ ದರಕ್ಕಿಂತಲೂ ಪೆಟ್ರೋಲ್, ಡೀಸೆಲ್‌ ದರ ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ವಾಗ್ದಾಳಿ
ನಡೆಸಿದ್ದಾರೆ.

ಬಿಜೆಪಿ ಭರವಸೆ ಕುರಿತಂತೆ ಮಾಧ್ಯಮ ವರದಿಯ ಜೊತೆಗೆ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯು ದುಬಾರಿ ದಿನಗಳನ್ನು ತಂದಿಟ್ಟಿದೆ’ ಎಂದು ವ್ಯಂಗ್ಯಮಾಡಿದ್ದಾರೆ. ಪೆಟ್ರೋಲ್‌, ಡೀಸೆಲ್‌  ದರವನ್ನು ಭಾನುವಾರ ಲೀಟರಿಗೆ 35 ಪೈಸೆ ಏರಿಸಲಾಗಿತ್ತು. ಇದರ ಪರಿಣಾಮ, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಬಳಸುವ ಪೆಟ್ರೋಲ್‌ದರವು, ವಿಮಾನಗಳಿಗೆ ಬಳಸುವ ಎಟಿಎಫ್‌ ತೈಲಕ್ಕಿಂತಲೂ ಶೇ 33ರಷ್ಟು ಅಧಿಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.