ದೇಶ

ಶೋಪಿಯಾನ್ ಎನ್ ಕೌಂಟರ್: ಎಲ್ ಇಟಿ ಉಗ್ರ, ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳು ಸೇನಾಪಡೆ ವಶಕ್ಕೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ಪಡೆಗಳ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಇಂದು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು ಸೇನೆ ವಶಕ್ಕೆ ಪಡೆದಿದೆ.

ಶೋಪಿಯಾನ್ ಎನ್ ಕೌಂಟರ್: ಎಲ್ ಇಟಿ ಉಗ್ರ, ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳು ಸೇನಾಪಡೆ ವಶಕ್ಕೆ
ಭಾರತೀಯ ಸೇನೆ
Published On :

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ಪಡೆಗಳ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಇಂದು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು ಸೇನೆ ವಶಕ್ಕೆ ಪಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಫಾಲಿಯನ್ ಮಂಡಲ್ ಪ್ರಾಂತ್ಯದಲ್ಲಿ ಉಗ್ರನನ್ನು ವಶಕ್ಕೆ ಪಡೆಯಲಾಗಿದ್ದು, ಈತನ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ಸೇನೆ ವಶಕ್ಕೆ ಪಡೆದಿದೆ. ಡ್ರೋನ್ ನಿಂದ ಬಂದಿದ್ದ 1 ಎಕೆ47 ಬಂದೂಕು, ನೈಟ್ ವಿಷನ್ ಡಿವೈಸ್, ಮೂರು ಮ್ಯಾಗಜಿನ್ ಬುಲೆಟ್ ಗಳು ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ಸೇನೆ ವಶಕ್ಕೆ ಪಡೆದಿದೆ ಎನ್ನಲಾಗಿದೆ. 

ಡ್ರೋನ್ ನಿಂದ ಬಂದಿದ್ದ ಶಸ್ತ್ರಾಸ್ತ್ರ ಪಡೆಯಲು ಬಂದಿದ್ದ ಲಷ್ಕರ್ ಉಗ್ರ
ಇನ್ನು ಬಂಧಿತ ಉಗ್ರ ಡ್ರೋನ್ ನಿಂದ ಬಂದಿಳಿದಿದ್ದ ಶಸ್ತ್ರಾಸ್ತ್ರಗಳನ್ನು ಪಡೆಯಲು ಫಾಲಿಯನ್ ಮಂಡಲ್ ಪ್ರಾಂತ್ಯಕ್ಕೆ ಆಗಮಿಸಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ. ಈತನ ಶಂಕಾಸ್ಪದ ನಡೆಯನ್ನು ಗಮನಿಸಿದ ಸೇನೆ ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಲಷ್ಕರ್ ಉಗ್ರನೆಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ ಡ್ರೋನ್ ನಿಂದ ಬಂದಿಳಿದಿದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ನಾನು ಬಂದಿದ್ದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. 

ಅಲ್ಲದೆ ಈತ ಹಲವು ಸ್ಥಳೀಯ ಉಗ್ರರೊಂದಿಗೆ ಸಂಪರ್ಕದಲ್ಲಿರುವ ಸೇನಾ ತನಿಖೆಯಿಂದ ತಿಳಿದುಬಂದಿದೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
 

Related Article

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಹಾವಳಿ: ಶೋಪಿಯಾನ್ ನಲ್ಲಿ ಮತ್ತೊಂದು ಸೇನಾ ಕಾರ್ಯಾಚರಣೆ, ಓರ್ವ ಉಗ್ರ ಹತ

ನಕಲಿ ಐಡಿ ಇಟ್ಟುಕೊಂಡು ಭಾರತೀಯ ಪ್ರಜೆ ಎಂದು ಓಡಾಟ: ದೆಹಲಿಯಲ್ಲಿ ಪಾಕ್ ಮೂಲದ ಉಗ್ರನ ಬಂಧನ

ಬಿಹಾರ ಮೂಲದ ಬೀದಿ ವ್ಯಾಪಾರಿಯನ್ನು ಹತ್ಯೆ ಮಾಡಿದ ಉಗ್ರ ಸೇರಿ ಶೋಪಿಯಾನ್ ನಲ್ಲಿ 3 ಟಿಆರ್ ಎಫ್ ಉಗ್ರರ ಹತ್ಯೆ: ಪೊಲೀಸರು

ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ 'ಕಠಿಣ ಉಪಕ್ರಮ'ದ ಅಗತ್ಯವಿದೆ: ಅರವಿಂದ ಕೇಜ್ರಿವಾಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.