ಅ.18 ರಿಂದ ದೇಶೀಯ ವಿಮಾನಗಳು ಯಾವುದೇ ಸೀಟು ಸಾಮರ್ಥ್ಯದ ನಿರ್ಬಂಧವಿಲ್ಲದೆ ಕಾರ್ಯ ನಿರ್ವಹಿಸಬಹುದು: ಕೇಂದ್ರ
ವಿಮಾನಯಾನ ಸಂಸ್ಥೆಗಳ ಅಕ್ಟೋಬರ್ 18 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ದೇಶಿ ವಿಮಾನಗಳು ಕಾರ್ಯಾಚರಣೆ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.

ನವದೆಹಲಿ: ವಿಮಾನಯಾನ ಸಂಸ್ಥೆಗಳ ಅಕ್ಟೋಬರ್ 18 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ದೇಶಿ ವಿಮಾನಗಳು ಕಾರ್ಯಾಚರಣೆ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯ ದೇಶೀಯ ವಿಮಾನಗಳ ಶೇ. 100 ಸಾಮರ್ಥ್ಯಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಿದೆ.
ಸಚಿವಾಲಯವು ತನ್ನ ಆದೇಶದಲ್ಲಿ "ನಿಗದಿತ ದೇಶೀಯ ವಿಮಾನ ಕಾರ್ಯಾಚರಣೆಯನ್ನು ಅಕ್ಟೋಬರ್ 18, 2021 ರಿಂದ ಯಾವುದೇ ಸಾಮರ್ಥ್ಯದ ನಿರ್ಬಂಧವಿಲ್ಲದೆ ಪುನಃಸ್ಥಾಪಿಸಲು ನಿರ್ಧರಿಸಲಾಗಿದೆ" ಎಂದು ಹೇಳಿದೆ.
ಸಚಿವಾಲಯದ ಆದೇಶದ ಪ್ರಕಾರ, ಸೆಪ್ಟೆಂಬರ್ 18 ರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್ ಪೂರ್ವ ದೇಶೀಯ ಸೇವೆಗಳಲ್ಲಿ ಶೇಕಡಾ 85 ರಷ್ಟು ಕಾರ್ಯನಿರ್ವಹಿಸುತ್ತಿವೆ. ಆಗಸ್ಟ್ 12 ರಿಂದ ವಿಮಾನಯಾನ ಸಂಸ್ಥೆಗಳು ಶೇ. 72.5, ಜುಲೈ 5 ಮತ್ತು ಆಗಸ್ಟ್ 12 ರ ನಡುವೆ ಶೇ. 65 ರಷ್ಟಿತ್ತು. ಜೂನ್ 1 ಮತ್ತು ಜುಲೈ 5 ರ ನಡುವೆ ಶೇ. 50 ರಷ್ಟು ದೇಶಿ ವಿಮಾನಗಳು ಕಾರ್ಯನಿರ್ವಹಿಸುತ್ತಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


