ಜೂಸ್ ಎಂದು ತಿಳಿದು ಅಕಸ್ಮಿಕವಾಗಿ ಆಲ್ಕೊಹಾಲ್ ಸೇವಿಸಿದ 5 ವರ್ಷದ ಬಾಲಕ ದುರ್ಮರಣ
ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು.

ವೆಲ್ಲೂರ್: ಹಣ್ಣಿನ ಜೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದೆ.
ರಾಕೇಶ್ ಎನ್ನುವ ಬಾಲಕ ಮೃತಪಟ್ಟ ದುರ್ದೈವಿ. ಆತನ ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು.
ಇದನ್ನೂ ಓದಿ: ಬೆಂಗಳೂರು: 11ನೇ ಮಹಡಿಯಿಂದ ಬಿದ್ದು ಬಾಲಕ ದುರ್ಮರಣ
ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜೂಸ್ ಎಂದು ತಪ್ಪು ತಿಳಿದ ರಾಕೇಶ್ ಅದರಲ್ಲಿದ್ದುದನ್ನು ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಏಕಾಏಕಿ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು.
ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.
Related Article
ಬೆಳಗಾವಿಯಲ್ಲಿ ದಾರುಣ ಘಟನೆ: ಕರೆಂಟ್ ಶಾಕ್ ನಿಂದ ಅಜ್ಜಿಯನ್ನು ರಕ್ಷಿಸಲು ಹೋದ ಮೊಮ್ಮಗನೂ ಸಾವು!
ಗರ್ಭಪಾತದ ವೇಳೆ ಅತ್ಯಾಚಾರ ಸಂತ್ರಸ್ತೆ ಸಾವು: ನಾಲ್ವರ ಬಂಧನ
ಮೇಘಾಲಯ: ಮಧ್ಯರಾತ್ರಿ ನದಿಗೆ ಬಿದ್ದ ಬಸ್, ಆರು ಪ್ರಯಾಣಿಕರು ಸಾವು, ಗಾಯಗೊಂಡವರು ಆಸ್ಪತ್ರೆಗೆ ದಾಖಲು
ಒಂದೇ ಕುಟುಂಬದ ಐವರ ಸಾವು ಪ್ರಕರಣ: ಆತ್ಮಹತ್ಯೆಗೂ ಮುನ್ನ ತನ್ನ 9 ತಿಂಗಳ ಮಗುವನ್ನೇ ಕೊಂದ ತಾಯಿ!
ಅವಳಿ ಮಕ್ಕಳನ್ನು ಬಾವಿಗೆಸೆದು ಆತ್ಮಹತ್ಯೆ ಯತ್ನ: ಕಂದಮ್ಮಗಳ ಸಾವು, ಬದುಕುಳಿದ ಮಹಿಳೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


