ನವೆಂಬರ್ 23 ರವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹ ಶೇ. 68 ರಷ್ಟು ಹೆಚ್ಚಳ
ಏಪ್ರಿಲ್ 1 ರಿಂದ ನವೆಂಬರ್ 23 ರವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ಶೇ. 68 ರಷ್ಟು ವೃದ್ಧಿಯಾಗಿದ್ದು, 6.92 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ತಿಳಿಸಿದ್ದಾರೆ.

ನವದೆಹಲಿ: ಏಪ್ರಿಲ್ 1 ರಿಂದ ನವೆಂಬರ್ 23 ರವರೆಗೆ ನೇರ ತೆರಿಗೆಯ ನಿವ್ವಳ ಸಂಗ್ರಹವು ಶೇ. 68 ರಷ್ಟು ವೃದ್ಧಿಯಾಗಿದ್ದು, 6.92 ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ತಿಳಿಸಿದ್ದಾರೆ.
2019-20 ಮತ್ತು 2020-21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ಶೇ. 27.29 ರಷ್ಟು ಹೆಚ್ಚಾಗಿದೆ. 6,92,833. 6 ಕೋಟಿ ಸಂಗ್ರಹದೊಂದಿಗೆ ಶೇ. 67. 93 ರಷ್ಟು ಬೆಳವಣಿಗೆಯನ್ನು ತೋರಿಸುತ್ತಿದೆ ಎಂದು ಲೋಕಸಭೆಯಲ್ಲಿ ಲಿಖಿತ ಹೇಳಿಕೆಯಲ್ಲಿಅವರು ಹೇಳಿದ್ದಾರೆ.
2020-21ನೇ ಹಣಕಾಸು ವರ್ಷದಲ್ಲಿ ರೂ. 4. 12 ಲಕ್ಷ ಕೋಟಿ ಸಂಗ್ರಹ ಆಗಿತ್ತು. 2019-20ನೇ ಹಣಕಾಸು ವರ್ಷದಲ್ಲಿ ರೂ. 5.44 ಕೋಟಿ ಇತ್ತು. ಪ್ರಸಕ್ತ ಹಣಕಾಸು ವರ್ಷದ ನವೆಂಬರ್ 23ರವರೆಗೆ ನೇರ ತೆರಿಗೆ ಸಂಗ್ರಹವು ರೂ.8.15 ಲಕ್ಷ ಕೋಟಿಗಳಷ್ಟಾಗಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 48.11 ರಷ್ಟು ಏರಿಕೆ ಕಂಡುಬಂದಿದೆ. ಕೋವಿಡ್-19 ಸಾಂಕ್ರಾಮಿಕದ ನಂತರ ಅವಧಿಯಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಏರಿಕೆಯಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


