ದೇಶ

ಉಧಮ್ ಪುರ-ದುರ್ಗ್ ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳಲ್ಲಿ ಬೆಂಕಿ: ಪ್ರಾಣಹಾನಿ ಇಲ್ಲ

ದೆಹಲಿಯಿಂದ ಚತ್ತೀಸ್ ಗಢಕ್ಕೆ ಸಂಚರಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ತಗುಲಿದೆ.

ಉಧಮ್ ಪುರ-ದುರ್ಗ್ ಎಕ್ಸ್ ಪ್ರೆಸ್ ರೈಲಿನ 2 ಬೋಗಿಗಳಲ್ಲಿ ಬೆಂಕಿ: ಪ್ರಾಣಹಾನಿ ಇಲ್ಲ
ರೈಲಿನ ಬೋಗಿಗಳಿಗೆ ಬೆಂಕಿ
Published On :

ಮಧ್ಯಪ್ರದೇಶ: ಉಧಮ್ ಪುರ್ ಎಕ್ಸ್ ಪ್ರೆಸ್ ರೈಲಿನ 2 ಎಸಿ ಬೋಗಿಗಳಿಗೆ ಬೆಂಕಿ ತಗುಲಿರುವ ಘಟನೆ ಶುಕ್ರವಾರ ಮಧ್ಯಾಹ್ನ ವರದಿಯಾಗಿದೆ. 

ಮಧ್ಯಪ್ರದೇಶದ ಮೊರೆನಾ ಮತ್ತು ಧೋಲ್ಪುರ್ ನಡುವಿನ ಹೇತಾಂಪುರ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸರಿಯಾದ ಸಮಯದಲ್ಲಿ ಅಗ್ನಿ ಅವಘಡವನ್ನು ನಿಯಂತ್ರಣಕ್ಕೆ ತಂದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯೂ ಸಂಭವಿಸಿಲ್ಲ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ದುರ್ಗ್ ನಿಂದ ಉಧಮ್ ಪುರಕ್ಕೆ ರೈಲು ಸಂಚರಿಸುತ್ತಿತ್ತು. ಎಸಿ1 ಕೋಚ್ ನಲ್ಲಿ ಮಧ್ಯಾಹ್ನ 3:30 ಕ್ಕೆ ಬೆಂಕಿ ಕಾಣಿಸಿಕೊಂಡು ಎಸಿ2 ಕೋಚ್ ಗೆ ಹರಡಿತ್ತು. ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು. ಕಿಟಕಿಯ ಗಾಜುಗಳನ್ನು ಒಡೆದು ಹೊರಬರುವಲ್ಲಿ ಪ್ರಯಾಣಿಕರು ಯಶಸ್ವಿಯಾದರು. ಎರಡೂ ಕೋಚ್ ಗಳಲ್ಲಿ 70 ಮಂದಿ ಪ್ರಯಾಣಿಕರಿದ್ದರು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.