ರೆಸ್ಲರ್ ನಿಶಾ ದಹಿಯಾ ಕೊಲೆ ಪ್ರಕರಣ: ದೆಹಲಿ ಪೊಲೀಸರಿಂದ ಪ್ರಮುಖ ಆರೋಪಿಗಳ ಬಂಧನ
ಹರ್ಯಾಣದ ರೆಸ್ಲರ್ 21 ವರ್ಷದ ನಿಶಾ ದಹಿಯಾ ಮತ್ತು ಆಕೆಯ ಸಹೋದರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ನವದೆಹಲಿ: ಹರ್ಯಾಣದ ರೆಸ್ಲರ್ 21 ವರ್ಷದ ನಿಶಾ ದಹಿಯಾ ಮತ್ತು ಆಕೆಯ ಸಹೋದರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ರೆಸ್ಲರ್ ನಿಶಾ ದಹಿಯಾ, ಆಕೆಯ ಸಹೋದರನ ಗುಂಡಿಕ್ಕಿ ಹತ್ಯೆ, ಆರೋಪಿ ಪರಾರಿ; ಹೆಸರಿನಿಂದ ಭಾರಿ ಗೊಂದಲ ಸೃಷ್ಟಿ
ಬಂಧಿತ ಆರೋಪಿಗಳನ್ನು ಪವನ್ ಮತ್ತು ಆತನ ಸಹಚರ ಸಚಿನ್ ಎಂದು ಗುರುತಿಸಲಾಗಿದೆ. ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರ ಸೂರಜ್ (18) ಅವರನ್ನು ಇದೇ ಪವನ್ ಮತ್ತು ಸಚಿನ್ ಕೊಂದು ಪರಾರಿಯಾಗಿದ್ದರು ಎಂದು ಪೊಲೀಸ್ ಮೂಲಗಳ ತಿಳಿಸಿವೆ. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರು ಪಡಿಸಿದಾಗ ಕೋರ್ಟ್ ಹರ್ಯಾಣ ಪೊಲೀಸರ ವಶಕ್ಕೆ ಆರೋಪಿಗಳನ್ನು ನೀಡಿದೆ. ಪ್ರಮುಖ ಆರೋಪಿ ಪವನ್ ನಿಶಾ ದಹಿಯಾ ಅವರ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದೇ ಬುಧವಾರ ಅಂದರೆ ನವೆಂಬರ್ 10ರಂದು ಹರ್ಯಾಣದ ಸೋನಿಪತ್ ಜಿಲ್ಲೆಯ ಹಲಾಲ್ಪುರ ಗ್ರಾಮದ ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಕುಸ್ತಿಪಟು ನಿಶಾ ದಹಿಯಾ (21) ಮತ್ತು ಆಕೆಯ ಸಹೋದರ ಸೂರಜ್ (18) ಅವರನ್ನು ತರಬೇತುದಾರ ಪವನ್ ಮತ್ತು ಸಚಿನ್ ಇತರರು ಗುಂಡಿಕ್ಕಿ ಕೊಂದು ಹಾಕಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತಯೇ ಅಕಾಡೆಮಿ ಮೇಲೆ ದಾಳಿ ಮಾಡಿದ ಸ್ಥಳೀಯ ಗ್ರಾಮಸ್ಥರು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, 65 ಕೆಜಿ ತೂಕದ ಕುಸ್ತಿಪಟು ನಿಶಾ ಮತ್ತು ಆಕೆಯ ಸಹೋದರ ಸೂರಜ್ ಅವರ ಮೃತದೇಹಗಳನ್ನು ಸೋನಿಪತ್ನ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.
ಆಕೆಯ ತಾಯಿ ಧನಪತಿ ಗಾಯಗೊಂಡು ರೋಹ್ಟಕ್ನ ಪಿಜಿಐಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಆಕೆಯ ತಂದೆ ದಯಾನಂದ ದಹಿಯಾ ಅವರು ಸಿಆರ್ಪಿಎಫ್ನಲ್ಲಿ ಇನ್ಸ್ಪೆಕ್ಟರ್ ಆಗಿದ್ದು, ಶ್ರೀನಗರದಲ್ಲಿ ಸೇವೆಸಲ್ಲಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


