ಡ್ರೈ ಫ್ರೂಟ್ಸ್ ಟ್ರೆಡರ್ಸ್ ಮೇಲೆ ಐಟಿ ದಾಳಿ, 200 ಕೋಟಿಗೂ ಅಧಿಕ ಲೆಕ್ಕವಿಲ್ಲದ ಆದಾಯ ಪತ್ತೆ!
ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಲ್ಲಿ ಡ್ರೈ ಫ್ರೂಟ್ಸ್ ವ್ಯಾಪಾರದಲ್ಲಿ ತೊಡಗಿರುವ ಜನರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶುಕ್ರವಾರ ತಿಳಿಸಿದೆ.

ನವೆದಹಲಿ: ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಲ್ಲಿ ಡ್ರೈ ಫ್ರೂಟ್ಸ್ ವ್ಯಾಪಾರದಲ್ಲಿ ತೊಡಗಿರುವ ಜನರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶುಕ್ರವಾರ ತಿಳಿಸಿದೆ.
ಅಕ್ಟೋಬರ್ 28 ರಂದು ದಾಳಿ ನಡೆಸಲಾಗಿದ್ದು, ಈ ಗುಂಪು ಹಲವಾರು ವರ್ಷಗಳಿಂದ ಒಣ ಹಣ್ಣುಗಳ ಖರೀದಿಯನ್ನು ವಿಪರೀತವಾಗಿ ಹೆಚ್ಚಿಸುತಿತ್ತು ಎಂದು ಸಿಬಿಡಿಟಿ ಹೇಳಿದೆ. ವಶಕ್ಕೆ ಪಡೆಯಲಾದ ದಾಖಲಾತಿಯಲ್ಲಿ ಮಾರಾಟ ಮತ್ತು ಖರೀದಿ ನಡುವೆ ದೊಡ್ಡ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದಾಳಿ ವೇಳೆ ರೂ. 40 ಕೋಟಿಯಷ್ಟು ಹೆಚ್ಚುವರಿ ದಾಸ್ತಾನು ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತು ಮತ್ತು ಸಂಗ್ರಹಿಸಿದ ಪುರಾವೆಗಳ ವಿಶ್ಲೇಷಣೆ ಪ್ರಕಾರ ಒಂದು ಗುಂಪು ಬೇನಾಮಿಯಾಗಿ ವ್ಯವಹಾರ ನಡೆಸುತಿತ್ತು ಎಂದು ಅದು ಹೇಳಿದೆ.
ಶೋಧ ಕಾರ್ಯದ ವೇಳೆ ಲೆಕ್ಕಕ್ಕೆ ಸಿಗದ 63 ಲಕ್ಷ ರೂ. ನಗದು ಮತ್ತು 2 ಕೋಟಿ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ ಮತ್ತು 200 ಕೋಟಿ ರೂ.ಗಿಂತ ಹೆಚ್ಚಿನ ಲೆಕ್ಕಕ್ಕೆ ಬಾರದ ಆದಾಯವನ್ನು ಪತ್ತೆಹಚ್ಚಿದೆ" ಎಂದು ಅದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


