ದೇಶ

ಡಿ.ಕೆ.ಶಿವಕುಮಾರ್ ಟ್ವೀಟ್ ಗೆ ತೆಲಂಗಾಣ ಸಚಿವ ರಾಮ ರಾವ್ ಸ್ಪಂದನೆ: ಮಂಡ್ಯ ಮೂಲದ ರೋಗಿಯ ಶವ ನೀಡಿದ ಹೈದರಾಬಾದ್ ಆಸ್ಪತ್ರೆ 

ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ತೊಂದರೆ ಅನುಭವಿಸುತ್ತಿದ್ದ ಮಂಡ್ಯ ಜಿಲ್ಲೆಯ ಮಹಿಳೆಯೊಬ್ಬರಿಗೆ ಸಹಾಯ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆಲಂಗಾಣದ ಐಟಿ ಇಲಾಖೆ ಸಚಿವ ಕೆ ಟಿ ರಾಮ ರಾವ್ ಅವರ ನೆರವು ಕೋರಿ ಸೂಕ್ತ ಸ್ಪಂದನೆ ಕೆಲವೇ ಹೊತ್ತಿನಲ್ಲಿ ಸಿಕ್ಕಿದೆ.

ಡಿ.ಕೆ.ಶಿವಕುಮಾರ್ ಟ್ವೀಟ್ ಗೆ ತೆಲಂಗಾಣ ಸಚಿವ ರಾಮ ರಾವ್ ಸ್ಪಂದನೆ: ಮಂಡ್ಯ ಮೂಲದ ರೋಗಿಯ ಶವ ನೀಡಿದ ಹೈದರಾಬಾದ್ ಆಸ್ಪತ್ರೆ 
ತೆಲಂಗಾಣದ ಐಟಿ ಖಾತೆ ಸಚಿವ ರಾಮ ರಾವ್
Published On :

ಹೈದರಾಬಾದ್: ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗೆ ತೊಂದರೆ ಅನುಭವಿಸುತ್ತಿದ್ದ ಮಂಡ್ಯ ಜಿಲ್ಲೆಯ ಮಹಿಳೆಯೊಬ್ಬರಿಗೆ ಸಹಾಯ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆಲಂಗಾಣದ ಐಟಿ ಇಲಾಖೆ ಸಚಿವ ಕೆ ಟಿ ರಾಮ ರಾವ್ ಅವರಿಗೆ ಟ್ವೀಟ್ ಮಾಡಿದ್ದಕ್ಕೆ ಸಹಾಯ ಸಿಕ್ಕಿದೆ.

ನಿನ್ನೆ ಸಾಯಂಕಾಲ 6.45ರ ಹೊತ್ತಿಗೆ ರಾಮ ರಾವ್ ಅವರ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಶಿವಕುಮಾರ್, ಹೈದರಾಬಾದ್ ನ ಮೆಡಿಕವರ್ ಆಸ್ಪತ್ರೆಯಲ್ಲಿ ಮಂಡ್ಯದ ಶಶಿಕಲಾ ಮಂಜುನಾಥ್ ಅವರ ಪತಿ ಮೃತಪಟ್ಟಿದ್ದು ಈ ಸಂದರ್ಭದಲ್ಲಿ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಕೋರಿದ್ದಾರೆ.

ಆಸ್ಪತ್ರೆಯ ಒಟ್ಟು ಬಿಲ್  7.5 ಲಕ್ಷ ರೂಪಾಯಿಗಳಾಗಿದ್ದು ಅದರಲ್ಲಿ ಕೇವಲ 2 ಲಕ್ಷ ರೂಪಾಯಿ ಮಾತ್ರ ಕುಟುಂಬದವರು ಪಾವತಿ ಮಾಡಿದ್ದಾರೆ ಎಂದು ಆಸ್ಪತ್ರೆ, ಶವವನ್ನು ಕುಟುಂಬದವರಿಗೆ ನೀಡಲು ನಿರಾಕರಿಸಿತ್ತು. ಇದರಿಂದ ಮಹಿಳೆ ಕಾಂಗ್ರೆಸ್ ಅಧ್ಯಕ್ಷರ ಮೊರೆ ಹೋಗಿದ್ದರು.

ಡಿ ಕೆ ಶಿವಕುಮಾರ್ ಅವರು ಟ್ವೀಟ್ ಮೂಲಕ ರಾಮ ರಾವ್ ಅವರ ಗಮನಕ್ಕೆ ಇದನ್ನು ನಿನ್ನೆ  ಸಾಯಂಕಾಲ ತಂದರು. ಕೆಲವೇ ಹೊತ್ತಿನಲ್ಲಿ ರಾಮ ರಾವ್ ಅವರ ತಂಡ ಆಸ್ಪತ್ರೆ ಅಧಿಕಾರಿಗಳನ್ನು ಸಂಪರ್ಕಿಸಿ ಹಣದ ವ್ಯವಸ್ಥೆ ಮಾಡಿ ಮಹಿಳೆಯ ಪತಿಯ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸುವ ನೆರವು ಮಾಡಿದ್ದರು. ಮತ್ತೆ ರಾತ್ರಿ 9.28ರ ಹೊತ್ತಿಗೆ ಡಿ ಕೆ ಶಿವಕುಮಾರ್ ಟ್ವೀಟ್ ಮೂಲಕ ರಾಮ ರಾವ್ ಅವರಿಗೆ ಧನ್ಯವಾದ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.