ಹೊಸ ಐಟಿ ನಿಯಮಗಳ ಅನುಸರಣೆ ಸ್ಥಿತಿಗತಿ ವರದಿ ಮಾಡಲು ದೊಡ್ಡ ಸೋಶಿಯಲ್ ಮೀಡಿಯಾ ಕಂಪನಿಗಳಿಗೆ ಮೋದಿ ಸರ್ಕಾರ ಸೂಚನೆ
ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳೊಂದಿಗೆ ತಮ್ಮ ಅನುಸರಣಾ ಸ್ಥಿತಿಯನ್ನು ಕೂಡಲೇ ವರದಿ ಮಾಡುವಂತೆ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮೋದಿ ಸರ್ಕಾರ ಬುಧವಾರ ಹೇಳಿದೆ

ನವದೆಹಲಿ: ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳೊಂದಿಗೆ ತಮ್ಮ ಅನುಸರಣಾ ಸ್ಥಿತಿಯನ್ನು ಕೂಡಲೇ ವರದಿ ಮಾಡುವಂತೆ ದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಮೋದಿ ಸರ್ಕಾರ ಬುಧವಾರ ಹೇಳಿದೆ.ಅಂತಹ ದೊಡ್ಡ ಡಿಜಿಟಲ್ ವೇದಿಕೆಗಳಿಂದ ಹೆಚ್ಚುವರಿ ನಿಯಮಗಳು ಇಂದಿನಿಂದ ಜಾರಿಗೆ ಬರಬೇಕು ಎಂದು ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ' ಬರೆದ ಟಿಪ್ಪಣಿಯಲ್ಲಿ ಐಟಿ ಸಚಿವಾಲಯ ಹೇಳಿದೆ.
ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಅಡಿಯಲ್ಲಿ ಡಿಜಿಟಲ್ ವೇದಿಕೆಗಳಿಂದ ನೇಮಕಗೊಂಡ ಮುಖ್ಯ ಅನುಸರಣಾ ಅಧಿಕಾರಿ,
ಸ್ಥಾನಿಕ ಕುಂದುಕೊರತೆ ಅಧಿಕಾರಿ, ನೋಡಲ್ ಸಂಪರ್ಕ ಅಧಿಕಾರಿಯ ವಿವರ ಮತ್ತು ಸಂಪರ್ಕದ ಮಾಹಿತಿಯನ್ನು ಸಚಿವಾಲಯ ಕೋರಿದೆ.
ಸಾಮಾಜಿಕ ಮಾಧ್ಯಮ ಮಧ್ಯವರ್ತಿಯ ವ್ಯಾಪ್ತಿಯಲ್ಲಿ ಬರುವ ಆ್ಯಪ್ ಹೆಸರು, ವೆಬ್‌ಸೈಟ್ ಮತ್ತು ಸೇವೆಯಂತಹ ವಿವರಗಳನ್ನು ಹೊರತುಪಡಿಸಿ, ಮೂರು ಪ್ರಮುಖ ಸಿಬ್ಬಂದಿಗಳ ವಿವರಗಳು ಮತ್ತು ದೈಹಿಕ ಸಂಪರ್ಕ ವಿಳಾಸವನ್ನು ಸಚಿವಾಲಯ ಕೋರಿದೆ. ಹೊಸ ನಿಯಮಗಳ ಅನುಸರಣೆಯ ಸ್ಥಿತಿಯ ಬಗ್ಗೆ ವರದಿ ಮಾಡಲು ಪ್ಲಾಟ್‌ಫಾರ್ಮ್‌ಗಳನ್ನು ಕೇಳಿದೆ.
ಆದಷ್ಟು ಬೇಗ ತಮ್ಮ ಪ್ರತಿಕ್ರಿಯೆ ನೀಡುವಂತೆ ಸಚಿವಾಲಯ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೇಳಿದ್ದು, ಟ್ವಿಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ ಆಫ್ ನಂತಹ ದೊಡ್ಡ ಮಾಧ್ಯಮ ವೇದಿಕೆಗಳು ಮುಖ್ಯ ಅನುಸರಣಾ ಅಧಿಕಾರಿ, ನೋಡಲ್ ಸಂಪರ್ಕಿತ ಅಧಿಕಾರಿ ಮತ್ತು ಸ್ಥಾನಿಕ ಕುಂದು ಕೊರತೆ ಅಧಿಕಾರಿ ನೇಮಕ ಸೇರಿದಂತೆ ಹೆಚ್ಚುವರಿ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


