'ಕೇಂದ್ರದ ಜೊತೆ ಮಾತ್ರ ವ್ಯವಹರಿಸುತ್ತೇವೆ': ಪಂಜಾಬ್ ಗೆ ನೇರವಾಗಿ ಲಸಿಕೆ ಮಾರಾಟ ನಿರಾಕರಿಸಿದ ಮೆಡೆರ್ನಾ
ಕೋವಿಡ್ ಲಸಿಕೆ ತಯಾರಕ ಮೆಡೆರ್ನಾ ತನ್ನ ಲಸಿಕೆಯನ್ನು ನೇರವಾಗಿ ಪಂಜಾಬ್ ಸರ್ಕಾರಕ್ಕೆ ಮಾರಾಟ ಮಾಡುವುದನ್ನು ನಿರಾಕರಿಸಿದೆ.

ಚಂಡೀಗಢ: ಕೋವಿಡ್ ಲಸಿಕೆ ತಯಾರಕ ಮೆಡೆರ್ನಾ ತನ್ನ ಲಸಿಕೆಯನ್ನು ನೇರವಾಗಿ ಪಂಜಾಬ್ ಸರ್ಕಾರಕ್ಕೆ ಮಾರಾಟ ಮಾಡುವುದನ್ನು ನಿರಾಕರಿಸಿದೆ.
ಮೆಡೆರ್ನಾ ನೀತಿಯ ಪ್ರಕಾರ, ಯಾವುದೇ ರಾಜ್ಯ ಸರ್ಕಾರಗಳು ಅಥವಾ ಖಾಸಗಿ ಪಕ್ಷಗಳೊಂದಿಗೆ ವ್ಯವಹರಿಸುವುದಿಲ್ಲ. ಕೇಂದ್ರ ಜೊತೆ ಮಾತ್ರ ವ್ಯವಹರಿಸಲಿದೆ. ಲಸಿಕೆ ಪಂಜಾಬ್ ರಾಜ್ಯ ನೋಡಲ್ ಅಧಿಕಾರಿ ವಿಕಾಸ್ ಗರ್ಗ್ ಮಾತನಾಡಿ, ಸ್ಪುಟ್ನಿಕ್ ವಿ, ಫಿಜರ್, ಮೆಡೆರ್ನಾ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಸೇರಿದಂತೆ ವಿವಿಧ ಕೋವಿಡ್ ಲಸಿಕೆ ತಯಾರಿಕರಿಂದ ನೇರವಾಗಿ ಖರೀದಿಸಲು ಅವರನ್ನು ಸಂಪರ್ಕಿಸಲಾಗಿದೆ. ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ನಿರ್ದೇಶನದಂತೆ ಲಸಿಕೆಯ ಸಾಧ್ಯತೆಗಳನ್ನು ಅನ್ವೇಷಿಸಲು ಸಾಧ್ಯವಿರುವ ಎಲ್ಲ ಮೂಲಗಳಿಂದ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆಯಲಾಗುವುದು. ಆದರೆ ಮೆಡೆರ್ನಾ ಮಾತ್ರ ಈ ಮೇಲಿನ ಹೇಳಿಕೆ ನೀಡಿದೆ ಎಂದರದು.
ಲಸಿಕೆಗಳು ಲಭ್ಯವಿಲ್ಲದ ಕಾರಣ ಕಳೆದ ಮೂರು ದಿನಗಳಲ್ಲಿ ಹಂತ 1 ಮತ್ತು 2 ನೇ ವಿಭಾಗಗಳಿಗೆ ಲಸಿಕೆ ನೀಡುವುದನ್ನು ನಿಲ್ಲಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು ಎಂದು ನೆನಪಿಸಿಕೊಳ್ಳಬಹುದು. ಕೇಂದ್ರ ಸರ್ಕಾರದಿಂದ ಇದುವರೆಗೆ 44 ಲಕ್ಷಕ್ಕಿಂತ ಕಡಿಮೆ ಲಸಿಕೆ ಡೋಸ್ ಗಳನ್ನು ಪಡೆದಿರುವ ರಾಜ್ಯದಲ್ಲಿ ತೀವ್ರ ಲಸಿಕೆ ಕೊರತೆ ಎದುರಾಗಿದ್ದು ಅದನ್ನು ನೀಗಿಸಲು ಲಸಿಕೆಗಳನ್ನು ಖರೀದಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದ್ದರು.
18-44 ವರ್ಷದವರಿಗೆ ಮೂರನೇ ಹಂತಕ್ಕೆ ಶೇಕಡಾವಾರು ಹಂಚಿಕೆಯಂತೆ, ರಾಜ್ಯ ಸರ್ಕಾರವು ನಿನ್ನೆ 66,000 ಸೇರಿದಂತೆ 4.2 ಲಕ್ಷ ಲಸಿಕೆ ಪ್ರಮಾಣವನ್ನು ಮಾತ್ರ ಖರೀದಿಸಲು ಸಾಧ್ಯವಾಗಿದೆ. ಒಟ್ಟು 3.65 ಲಕ್ಷಗಳನ್ನು ಈಗಾಗಲೇ ಬಳಸಲಾಗಿದ್ದು, ಈಗಿನಂತೆ ಬಳಕೆಗೆ ಕೇವಲ 64000 ಮಾತ್ರ ಉಳಿದಿದೆ ಎಂದು ಗಾರ್ಗ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


