ದೇಶ

ಕೋವಿಡ್-19: ಮುಂಬೈನಲ್ಲಿ ಹೊಸದಾಗಿ 1431 ಪ್ರಕರಣ ಪತ್ತೆ, 49 ಸಾವು

ಕೋವಿಡ್-19 ಹೊಸ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳಲ್ಲಿ ಮುಂಬೈನಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಭಾನುವಾರ 1,431 ಹೊಸ ಪ್ರಕರಣಗಳು ದೃಢಪಟ್ಟಿದ್ದು, 49 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್-19: ಮುಂಬೈನಲ್ಲಿ ಹೊಸದಾಗಿ 1431 ಪ್ರಕರಣ ಪತ್ತೆ, 49 ಸಾವು
ಸಾಂದರ್ಭಿಕ ಚಿತ್ರ
Published On :

ಮುಂಬೈ: ಕೋವಿಡ್-19 ಹೊಸ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳಲ್ಲಿ ಮುಂಬೈನಲ್ಲಿ ಗಣನೀಯ ಪ್ರಮಾಣದಲ್ಲಿ 
ಕಡಿಮೆಯಾಗಿದೆ. ಭಾನುವಾರ 1,431 ಹೊಸ ಪ್ರಕರಣಗಳು ದೃಢಪಟ್ಟಿದ್ದು, 49 ಮಂದಿ ಸಾವನ್ನಪ್ಪಿದ್ದಾರೆ. 23,314 ಪರೀಕ್ಷೆಗಳನ್ನು
ಮಾಡಿರುವುದಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.

ಹೊಸ ಪ್ರಕರಣಗಳೊಂದಿಗೆ ಮುಂಬೈನಲ್ಲಿ ಕೋವಿಡ್-19 ಒಟ್ಟು ಸೋಂಕಿತರ ಸಂಖ್ಯೆ 6,97,810ಕ್ಕೆ ಏರಿಕೆಯಾದರೆ,
ಒಟ್ಟಾರೇ ಸಾವಿನ ಸಂಖ್ಯೆ 4,623ಕ್ಕೆ ಏರಿಕೆಯಾಗಿರುವುದಾಗಿ ಮಾಹಿತಿ ನೀಡಿದೆ.

ಭಾನುವಾರ 1,470 ಸೋಂಕಿತರು ಬಿಡುಗಡೆಯಾಗಿದ್ದು, ಗುಣಮುಖರಾದವರ ಒಟ್ಟು ಸಂಖ್ಯೆ 6,52,686ಕ್ಕೆ ಏರಿಕೆಯಾಗಿದೆ.
ವಾಣಿಜ್ಯ ನಗರಿಯಲ್ಲಿ ಈವರೆಗೂ ಪರೀಕ್ಷಿಸಲಾದ ಸ್ಯಾಂಪಲ್ ಗಳ ಸಂಖ್ಯೆ 60,72,000ಕ್ಕೆ ತಲುಪಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.