ದೇಶ

ಸೂರಜ್ ಪುರ ಜಿಲ್ಲಾಧಿಕಾರಿ  ವಿರುದ್ಧ ಕ್ರಮಕ್ಕೆ ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ

ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಯುವಕನಿಗೆ ಥಳಿಸಿದ್ದ ಸೂರಜ್ ಪುರ ಜಿಲ್ಲಾಧಿಕಾರಿಯನ್ನು ತೆಗೆದುಹಾಕಲು ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ ನೀಡಿದ್ದಾರೆ.

ಸೂರಜ್ ಪುರ ಜಿಲ್ಲಾಧಿಕಾರಿ  ವಿರುದ್ಧ ಕ್ರಮಕ್ಕೆ ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ
ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್
Published On :

ರಾಯ್ ಪುರ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ ಯುವಕನಿಗೆ ಥಳಿಸಿದ್ದ ಸೂರಜ್ ಪುರ ಜಿಲ್ಲಾಧಿಕಾರಿಯನ್ನು ತೆಗೆದುಹಾಕಲು ಚತ್ತೀಸ್ ಗಢ ಸಿಎಂ ಭೂಪೇಶ್ ಭಗೇಲ್ ಆದೇಶ ನೀಡಿದ್ದಾರೆ. 

ಅಧಿಕಾರಿಗಳು ಯುವಕನಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.   

ಕೊರೋನಾ ತಡೆಗೆ ಲಾಕ್ ಡೌನ್ ವಿಧಿಸಿರುವ ನಡುವೆಯೂ ಯುವಕನೋರ್ವ ಸಂಚರಿಸುತ್ತಿದ್ದ, ಇದನ್ನು ಅಧಿಕಾರಿಗಳು ಕಂಡೊಡನೆಯೇ ಆತ ತಾನು ಸಂಚರಿಸುತ್ತಿದ್ದದ್ದಕ್ಕೆ ಕಾರಣವನ್ನೂ ನೀಡಲು ಯತ್ನಿಸಿದ್ದ. ಆಡರೆ ಮೊಬೈಲ್ ಹಾಗೂ ಯುವಕ ನೀಡುತ್ತಿದ್ದ ಕಾಗದವನ್ನು ಎಸೆದು ಕಾರಾಣವನ್ನು ಆಲಿಸದೇ ಅಧಿಕಾರಿಗಳು ಯುವಕನನ್ನು ಥಳಿಸಿದ್ದರು. 

ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ಜಿಲ್ಲಾಧಿಕಾರಿಗಳನ್ನು ತೆಗೆದುಹಾಕುವಂತೆ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಘಟನೆಯನ್ನು ಖಂಡಿಸಿರುವ ಸಿಎಂ, "ಚತ್ತೀಸ್ ಗಢದಲ್ಲಿ ಇಂತಹ ಘಟನೆಗಳನ್ನು ಸಹಿಸುವುದಿಲ್ಲ" ಎಂದು ಹೇಳಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.