ತಿರುವನಂತಪುರಂ ನಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಯ ಮೃತದೇಹ ನಾಪತ್ತೆ!
ಕೋವಿಡ್-19 ಸೋಂಕಿತ ವ್ಯಕ್ತಿಯ ಮೃತದೇಹ ಕುಟುಂಬ ಸದಸ್ಯರಿಗೆ ಲಭ್ಯವಾಗದೇ ನಾಪತ್ತೆಯಾಗಿರುವ ಘಟನೆ ತಿರುವನಂತಪುರಂನ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ತಿರುವನಂತಪುರಂ: ಕೋವಿಡ್-19 ಸೋಂಕಿತ ವ್ಯಕ್ತಿಯ ಮೃತದೇಹ ಕುಟುಂಬ ಸದಸ್ಯರಿಗೆ ಲಭ್ಯವಾಗದೇ ನಾಪತ್ತೆಯಾಗಿರುವ ಘಟನೆ ತಿರುವನಂತಪುರಂನ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಕೋವಿಡ್-19 ನಿಂದ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಪ್ರಸಾದ್ ಎಂದು ಗುರುತಿಸಲಾಗಿದ್ದು, ನೆಯ್ಯತಿಂಕರದ ನಿವಾಸಿಯಾಗಿದ್ದಾರೆ. ಈ ವ್ಯಕ್ತಿಯ ಮೃತದೇಹ ದೊರೆಯದೇ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ದೂರು ದಾಖಲಿಸಿ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದರು.
ಅದೇ ಆಸ್ಪತ್ರೆಯಲ್ಲಿ ಪ್ರಸಾದ್ ಎಂಬ ಹೆಸರಿನ ಇಬ್ಬರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ, ಸಿಬ್ಬಂದಿಗಳು ದಾಖಲಾತಿಗಳಲ್ಲಿ ತಪ್ಪು ಮಾಡಿದ್ದರಿಂದ ಈ ಯಡವಟ್ಟು ಸಂಭವಿಸಿದೆ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ನೆಯ್ಯತಿಂಕರ ಶಾಸಕ ಕೆ ಅನ್ಸಲನ್ ಈ ಬಗ್ಗೆ ಮಾಹಿತಿ ನೀಡಿದ್ದು, ಕುಟುಂಬ ಸದಸ್ಯರು ಹುಡುಕುತ್ತಿದ್ದ ಮೃತದೇಹಕ್ಕೆ ಅದಾಗಲೇ ಬೇರೊಬ್ಬರು ಅಂತ್ಯಸಂಸ್ಕಾರ ನೆರೆವೇರಿಸಿದ್ದರಿಂದ ಮೃತದೇಹ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಮೃತದೇಹವನ್ನು ಕುಟುಂಬ ಸದಸ್ಯರಿಗೆ ನೀಡದೇ ಬೇರೊಬ್ಬರಿಗೆ ಹಸ್ತಾಂತರಿಸಿರುವುದರಿಂದ ಈ ಯಡವಟ್ಟು ಸಂಭವಿಸಿದೆ.
ಕಳೆದ ವರ್ಷ ಕೊಲ್ಲಂ ನಲ್ಲಿ ಇದೇ ಮಾದರಿಯ ಘಟನೆ ನಡೆದಿತ್ತು. ಕೋವಿಡ್-19 ಮೃತರ ದೇಹವನ್ನು ಸಂಬಂಧಿಕರಿಗಲ್ಲದೇ ಬೇರೊಬ್ಬರಿಗೆ ಹಸ್ತಾಂತರಿಸಲಾಗಿತ್ತು. ಶವಾಗಾರದಲ್ಲಿದ್ದ ಸಿಬ್ಬಂದಿಗಳ ವಿರುದ್ಧ ಅಧಿಕಾರಿಗಳು ಅಕ್ಟೋಬರ್ ಕ್ರಮ ಕೈಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


