ಯುಎಸ್ ಹಕ್ಕುಸ್ವಾಮ್ಯ ಕಾಯ್ದೆ ಪಾಲಿಸುವುದಾದರೆ ಭಾರತೀಯ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಿ: ರವಿಶಂಕರ್ ಪ್ರಸಾದ್
ತಮ್ಮ ಖಾತೆಯನ್ನು ಬ್ಲಾಕ್ ಮಾಡಲು ಟ್ವಿಟರ್ ಅಮೆರಿಕದ ಹಕ್ಕುಸ್ವಾಮ್ಯ ಕಾಯ್ದೆಯನ್ನು ಅನುಸರಿಸುವುದಾದರೆ, ಅದು ಕಾರ್ಯನಿರ್ವಹಿಸುತ್ತಿರುವ ಮತ್ತು ಹಣ ಸಂಪಾದಿಸುತ್ತಿರುವ ಭಾರತದಲ್ಲಿನ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಬೇಕೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ.

ನವದೆಹಲಿ: ತಮ್ಮ ಖಾತೆಯನ್ನು ಬ್ಲಾಕ್ ಮಾಡಲು ಟ್ವಿಟರ್ ಅಮೆರಿಕದ ಹಕ್ಕುಸ್ವಾಮ್ಯ ಕಾಯ್ದೆಯನ್ನು ಅನುಸರಿಸುವುದಾದರೆ, ಅದು ಕಾರ್ಯನಿರ್ವಹಿಸುತ್ತಿರುವ ಮತ್ತು ಹಣ ಸಂಪಾದಿಸುತ್ತಿರುವ ಭಾರತದಲ್ಲಿನ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಬೇಕೆಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಬುಧವಾರ ಹೇಳಿದ್ದಾರೆ.
ಇಂಡಿಯಾ ಗ್ಲೊಬಲ್ ಪೋರಂನಲ್ಲಿ ಮಾತನಾಡಿದ ಅವರು, ಅಮೆರಿಕದ ಡಿಜಿಟಿಲ್ ಮಿಲೆನಿಯಂ ಹಕ್ಕುಸ್ವಾಮ್ಯ ಕಾಯ್ದೆಯಡಿ ನಾಲ್ಕು ವರ್ಷಗಳ ಹಿಂದೆ ಮಾಡಲಾದ ದೂರಿಗಾಗಿ ಒಂದು ಗಂಟೆಗಳ ಕಾಲ ತಮ್ಮ ಖಾತೆಯನ್ನು ಟ್ವಿಟರ್ ಕಳೆದ ವಾರ ನಿರ್ಬಂಧಿಸಿತ್ತು. ಅಮೆರಿಕದ ಡಿಜಿಟಲ್ ಹಕ್ಕುಸ್ವಾಮ್ಯ ಕಾಯ್ದೆಯನ್ನು ಅನುಸರಿಸುವುದಾರೆ ಭಾರತದಲ್ಲಿನ ಹಕ್ಕು ಸ್ವಾಮ್ಯ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದರು.
ನನ್ನ ಇಡೀ ನಿಲುವನ್ನು ಅಮೆರಿಕ ಕಾನೂನು ನಿಯಂತ್ರಿಸುತ್ತದೆ ಎಂದು ನೀವು ಹೇಳಬಾರದು, ದೊಡ್ಡ ತಂತ್ರಜ್ಞಾನ ಮತ್ತು ಪ್ರಜಾಪ್ರಭುತ್ವದ ಪಾತ್ರವನ್ನು ಸಂತೋಷದಿಂದ ಸಂಯೋಜಿಸಲು ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ ಎಂದು ಪ್ರಸಾದ್ ತಿಳಿಸಿದರು.
ಸೋಷಿಯಲ್ ಮೀಡಿಯಾ ಕಂಪನಿಗಳು ಭಾರತದಲ್ಲಿ ವ್ಯಾಪಾರ ಮಾಡಲು ಮುಕ್ತವಾಗಿವೆ ಆದರೆ ಅವರು ಭಾರತೀಯ ಸಂವಿಧಾನ ಮತ್ತು ಕಾನೂನುಗಳಿಗೆ ಜವಾಬ್ದಾರರಾಗಿರಬೇಕು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


