'ವಿಶ್ವ ಗುರು' ಭಾರತ ಮೋದಿಯಿಂದಾಗಿ 'ವಿಶ್ವ ಬಿಕಾರಿ'ಯಾಗುತ್ತಿದೆ:
ಭಾರತವನ್ನು ವಿಶ್ವಗುರು ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಶ್ವ ಬಿಕಾರಿಯನ್ನಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ನವದೆಹಲಿ: ಭಾರತವನ್ನು ವಿಶ್ವಗುರು ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಂಕರ್, ಯುಎಸ್ಡಿ 5 ಟ್ರಿಲಿಯನ್ ಆರ್ಥಿಯತೆಯನ್ನು ಸೃಷ್ಟಿಸಿ, ವಿಶ್ವಕ್ಕೆ ಭಾರತ ಗುರುವಾಗಲಿದೆ ಎಂದು ಮೋದಿ ಹೇಳಿದ್ದರು. ಆದರೆ ಈಗ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳಿಂದ ಭಾರತ ಸಹಾಯ ಪಡೆಯುತ್ತಿದೆ. ಭಾರತವನ್ನು ಪ್ರಧಾನಿ ಮೋದಿ ವಿಶ್ವ ಬಿಕಾರಿಯನ್ನಾಗಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಕೊರೊನಾ 2ನೇ ಅಲೆ ವೇಳೆ ಮೋದಿ ಅವರ ನಿರ್ವಹಣೆ ಕಳಪೆಯಾಗಿತ್ತು. ಹೇಗೆ ನಿರ್ವಹಣೆ ಮಾಡಬಾರದು ಎಂಬುವುದಕ್ಕೆ ಮೋದಿ ಆಡಳಿತ ಮಾದರಿಯಾಗಿದೆ. 5 ಟ್ರಿಲಿಯನ್ ಆರ್ಥಿಕತೆ ಮೂಲಕ ಭಾರತ ವಿಶ್ವಗುರು ಎನಿಸಿಕೊಳ್ಳುತ್ತೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಆದರೆ ಈಗ ನಿತ್ಯ ಆಕ್ಸಿಜನ್ ಹೊತ್ತ ವಿಮಾನಗಳು ವಿದೇಶದಿಂದ ಬರುತ್ತಿವೆ. ಪ್ರಪಂಚದ ಎದುರು ಭಾರತ ಆಕ್ಸಿಜನ್ಗಾಗಿ ಕೈಚಾಚಿ ಕೂತಿದೆ. ಭಾರತವನ್ನು ಪ್ರಧಾನಿ ಮೋದಿ ವಿಶ್ವಬಿಕಾರಿಯನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


