ಉತ್ತರ ಪ್ರದೇಶ: ಮೊದಲ ರಾತ್ರಿಯಂದೇ ನವವಧುವಿನ ಮೇಲೆ ಪತಿ, ಇಬ್ಬರು ಮೈದುನರಿಂದ ಗ್ಯಾಂಗ್ ರೇಪ್, ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಹಿಂಸೆ!
ಮೂರು ದಿನಗಳ ಹಿಂದೆ ಮದುವೆಯಾಗಿದ್ದ ನವವಧುವಿನ ಮೇಲೆ ಆಕೆಯ ಪತಿ, ಇಬ್ಬರು ಮೈದುನರು ಗ್ಯಾಂಗ್ ರೇಪ್ ಮಾಡಿದ್ದಲ್ಲದೆ ಖಾಸಗಿ ಭಾಗಗಳನ್ನು ಸುಟ್ಟು ಹಾಕಿರುವ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಬುಡಾನ್: ಮೂರು ದಿನಗಳ ಹಿಂದೆ ಮದುವೆಯಾಗಿದ್ದ ನವವಧುವಿನ ಮೇಲೆ ಆಕೆಯ ಪತಿ, ಇಬ್ಬರು ಮೈದುನರು ಗ್ಯಾಂಗ್ ರೇಪ್ ಮಾಡಿದ್ದಲ್ಲದೆ ಖಾಸಗಿ ಭಾಗಗಳನ್ನು ಸುಟ್ಟು ಹಾಕಿರುವ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
20 ವರ್ಷದ ಸಂತ್ರಸ್ತ ಮಹಿಳೆ ತನ್ನ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ. ಅಲ್ಲದೆ ಪತಿಯ ಕುಟುಂಬದವರು ವರದಕ್ಷಿಣೆಗಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ. ಅಲ್ಲದೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬುಡಾನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ ಶರ್ಮಾ ತಿಳಿಸಿದ್ದಾರೆ.
ಇನ್ನು ಯುವತಿ ದೂರಿನಲ್ಲಿ ತಂಪು ಪಾನೀಯಕ್ಕೆ ವಿಷ ಬೆರಸಿ ಕುಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವುದಾಗಿ ತಿಳಿಸಿದರು. ಮಗಳಿಗೆ ಕಿರುಕುಳ ನೀಡುತ್ತಿರುವ ಮಾಹಿತಿ ಪಡೆದ ತಂದೆ ಪೊಲೀಸರೊಂದಿಗೆ ಅಳಿಯನ ಮನೆಗೆ ತೆರಳಿ ಅಲ್ಲಿಂದ ಮಗಳನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂತ್ರಸ್ತೆಯ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಪ್ರಕರಣದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಕಲ್ಪ ಶರ್ಮಾ ತಿಳಿಸಿದರು.
ಜರಿಫ್ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಟ್ವಾಲಿ ಸಹಸ್ವಾನ್ ಪ್ರದೇಶದ ಯುವತಿ ಇದೇ ಜೂನ್ 22ರಂದು ಜರಿಫ್ನಗರದ ಉಸ್ಮಾನ್ಪುರ ಪ್ರದೇಶದ ನಿವಾಸಿಯನ್ನು ಮದುವೆಯಾಗಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


