ದೇಶ

ಟಿಆರ್ ಪಿ ಹಗರಣ: 2ನೇ ಆರೋಪ ಪಟ್ಟಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರು

ಟಿಆರ್ ಪಿ ಹಗರಣದ 2ನೇ ಆರೋಪ ಪಟ್ಟಿಯಲ್ಲಿ ರಿಪಬ್ಲಿಕ್ ಚಾನಲ್ ನ ಅರ್ನಬ್ ಗೋಸ್ವಾಮಿ ಹೆಸರನ್ನು ಮುಂಬೈ ಪೊಲೀಸರು ಸೇರಿಸಿದ್ದಾರೆ.

ಟಿಆರ್ ಪಿ ಹಗರಣ: 2ನೇ ಆರೋಪ ಪಟ್ಟಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರು
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ
Published On :

ಮುಂಬೈ: ಟಿಆರ್ ಪಿ ಹಗರಣದ 2ನೇ ಆರೋಪ ಪಟ್ಟಿಯಲ್ಲಿ ರಿಪಬ್ಲಿಕ್ ಚಾನಲ್ ನ ಅರ್ನಬ್ ಗೋಸ್ವಾಮಿ ಹೆಸರನ್ನು ಮುಂಬೈ ಪೊಲೀಸರು ಸೇರಿಸಿದ್ದಾರೆ. 

ಪೊಲೀಸ್ ಇಲಾಖೆಯ ಕ್ರೈಮ್ ಗುಪ್ತಚರ ವಿಭಾಗ ಟಿಆರ್ ಪಿ ಹಗರಣದ ತನಿಖೆ ನಡೆಸುತ್ತಿದ್ದು, ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. "ಅರ್ನಬ್ ಗೋಸ್ವಾಮಿ ಹಾಗೂ ಎಆರ್ ಜಿ ಔಟ್ಲಾಯರ್ ನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ" ಎಂದು ರಿಪಬ್ಲಿಕ್ ಚಾನಲ್ ಮುಖ್ಯ ಸಂಪಾದಕರ ಪರ ವಕೀಲರು ಮಾಹಿತಿ ನೀಡಿದ್ದಾರೆ

ಕಳೆದ ವರ್ಷ ಅಕ್ಟೋಬರ್ ನಲ್ಲಿ ಟಿಆರ್ ಪಿ ಹಗರಣ ಬೆಳಕಿಗೆ ಬಂದಿತ್ತು. ಬಿಎಆರ್ ಸಿ ಈ ಸಂಬಂಧ ಹಂಸ ರಿಸರ್ಚ್ ಗ್ರೂಪ್ ಮೂಲಕ ದೂರು ದಾಖಲಿಸಿ, ಕೆಲವು ಚಾನಲ್ ಗಳು ಟಿಆರ್ ಪಿ ಸಂಖ್ಯೆಯನ್ನು ತಿರುಚುತ್ತಿವೆ ಎಂದು ಆರೋಪಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.