ದೇಶ

ದೆಹಲಿ ಏಮ್ಸ್ 9ನೇ ಮಹಡಿಯಲ್ಲಿ ಅಗ್ನಿ ಅವಘಡ: 22 ಫೈರ್ ಇಂಜಿನ್ ಕಾರ್ಯಾಚರಣೆ

ದೆಹಲಿ ಏಮ್ಸ್ ಆಸ್ಪತ್ರೆಯ 9 ನೇ ಮಹಡಿಯಲ್ಲಿ ಜೂ.17 ರಂದು ಅಗ್ನಿ ಅವಘಡ ವರದಿಯಾಗಿದೆ.

ದೆಹಲಿ ಏಮ್ಸ್ 9ನೇ ಮಹಡಿಯಲ್ಲಿ ಅಗ್ನಿ ಅವಘಡ: 22 ಫೈರ್ ಇಂಜಿನ್ ಕಾರ್ಯಾಚರಣೆ
ದೆಹಲಿ ಏಮ್ಸ್ ಕಟ್ಟಡದಲ್ಲಿ ಬೆಂಕಿ
Published On :

ನವದೆಹಲಿ: ದೆಹಲಿ ಏಮ್ಸ್ ಆಸ್ಪತ್ರೆಯ 9 ನೇ ಮಹಡಿಯಲ್ಲಿ ಜೂ.17 ರಂದು ಅಗ್ನಿ ಅವಘಡ ವರದಿಯಾಗಿದೆ.  

ಅದೃಷ್ಟವಶಾತ್ ಈ ಮಹಡಿಯಲ್ಲಿ ಯಾವುದೇ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿಲ್ಲವಾದ ಕಾರಣ ಯಾರಿಗೂ ಜೀವ ಹಾನಿ, ಗಾಯಗಳು ಸಂಭವಿಸಿಲ್ಲ.

ಈ ದುರಂತ ಸಂಭವಿಸಿದಾಗ 9 ನೇ ಮಹಡಿಯಲ್ಲಿದ್ದ ಜಾಗ ಖಾಲಿ ಇತ್ತು ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ರಾತ್ರಿ 10:32 ರ ವೇಳೆಗೆ ಮಾಹಿತಿ ಲಭ್ಯವಾಯಿತು ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.

ಈ ಮಹಡಿಯಲ್ಲಿ ರೋಗನಿರ್ಣಯ ಪ್ರಯೋಗಾಲಯ, ಪರೀಕ್ಷಾ ವಿಭಾಗಗಳಿವೆ. ರೆಫ್ರಿಡ್ಜರೇಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣಾದಿಂದಾಗಿ ಬೆಂಕಿ ಹೊತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಅಗ್ನಿ ಶಾಮಕ ದಳದ 22 ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ, ಬೆಂಕಿ ತಹಬದಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.