ಇಸ್ರೇಲಿ ರಾಯಭಾರಿ ಕಛೇರಿ ಬಳಿ ಸ್ಫೋಟ ಪ್ರಕರಣ: ಇಬ್ಬರ ಗುರುತು ಪತ್ತೆಗೆ ಮಾಹಿತಿ ನೀಡಿದರೆ ತಲಾ 10 ಲಕ್ಷ ರೂ. ಬಹುಮಾನ!
ಈ ವರ್ಷದ ಪ್ರಾರಂಭದಲ್ಲಿ ನವದೆಹಲಿಯ ಇಸ್ರೇಲಿ ರಾಯಭಾರಿ ಕಛೇರಿ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿನ 2 ಆರೋಪಿಗಳ ಗುರುತು ಪತ್ತೆಗೆ ಸಹಕರಿಸಿದವರಿಗೆ ತಲಾ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಎನ್ಐಎ ಘೋಷಿಸಿದೆ.

ನವದೆಹಲಿ: ಈ ವರ್ಷದ ಪ್ರಾರಂಭದಲ್ಲಿ ನವದೆಹಲಿಯ ಇಸ್ರೇಲಿ ರಾಯಭಾರಿ ಕಛೇರಿ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿನ 2 ಆರೋಪಿಗಳ ಗುರುತು ಪತ್ತೆಗೆ ಸಹಕರಿಸಿದವರಿಗೆ ತಲಾ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಎನ್ಐಎ ಘೋಷಿಸಿದೆ.
ಜೂ.15 ರಂದು ಎನ್ಐಎ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಇಸ್ರೇಲಿ ರಾಯಭಾರಿ ಕಛೇರಿಯ ಹೊರಭಾಗದಲ್ಲಿ ಈ ವರ್ಷದ ಪ್ರಾರಂಭದಲ್ಲಿ ಸ್ಫೋಟಕಗಳನ್ನು ಇರಿಸುತ್ತಿದ್ದಾಗ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಸಿಸಿಟಿವಿಯಲ್ಲಿ ದಾಖಲಾದ ವ್ಯಕ್ತಿಗಳ ಗುರುತು ಪತ್ತೆಗೆ ಸಹಕರಿಸಿದವರಿಗೆ ಇಬ್ಬರಿಂದ ತಲಾ 10 ಲಕ್ಷ ರೂಪಾಯಿ ಬಹುಮಾನ ದೊರೆಯಲಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಡಿಯೋಗಳಿರುವ ಡ್ರೈವ್ ಲಿಂಕ್ ನ್ನು https://drive.google.com/drive/folders/18kmmCvfFXm8bXQovI9bxye8qcr0zLqFr?usp ಹಂಚಿಕೊಂಡಿರುವ ಎನ್ಐಎ, ವಿಡಿಯೋದಲ್ಲಿ ದಾಖಲಾಗಿರುವವರ ಗುರುತು ಪತ್ತೆಯಾದಲ್ಲಿ ಅವರು do.nia@gov.in info.nia@gov.in ಗೆ ಮೇಲ್ ಕಳಿಸಬಹುದಾಗಿದೆ ಅಥವಾ 011-24368800, 9654447345 ಸಂಖ್ಯೆಗೆ ದೂರವಾಣಿ ಕರೆ ಮಾಡಬಹುದಾಗಿದೆ ಎಂದು ಎನ್ಐಎ ಹೇಳಿದೆ.
ದೆಹಲಿಯ ಇಸ್ರೇಲ್ ರಾಯಭಾರಿ ಕಛೇರಿ ಇರುವ ಪ್ರದೇಶದಲ್ಲಿ ಜ.29 ರಂದು ಐಇಡಿ ಸ್ಫೋಟ ಸಂಭವಿಸಿತ್ತು. ಈ ಘಟನೆಯ ತನಿಖೆಯನ್ನು ಫೆ.2 ರಂದು ಎನ್ಐಎಗೆ ವಹಿಸಲಾಗಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ, ಆದರೆ ಕೆಲವು ಕಾರುಗಳು ಜಖಂಗೊಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


