ದೇಶ

ಲೋಕಸಭೆಯ ಎಲ್ ಜೆಪಿ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆ!

ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷ (ಎಲ್ ಜೆಪಿ) ನೂತನ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆಯಾಗಿದ್ದಾರೆ.

ಲೋಕಸಭೆಯ ಎಲ್ ಜೆಪಿ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆ!
ಪಶುಪತಿ ಕುಮಾರ್ ಪಾರಸ್
Published On :

ನವದೆಹಲಿ: ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್ ಜೆಪಿ) ನೂತನ ನಾಯಕನಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆಯಾಗಿದ್ದಾರೆ. ಪಾರಸ್ ಪ್ರಸ್ತುತ ಬಿಹಾರದಲ್ಲಿನ ಹಾಜಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಪಕ್ಷದ ಕುಡಿ ಚಿರಾಗ್ ಪಾಸ್ವನ್ ಅವರನ್ನು ಎಲ್ ಜೆಪಿಯಲ್ಲಿ ಅಸ್ಥಿರಗೊಳಿಸುವ ಭಿನ್ನಮತೀಯರ ಯೋಜನೆಯ ಭಾಗವಾಗಿದೆ. 

ಲೋಕಸಭೆಯಲ್ಲಿ ಎಲ್ ಜೆಪಿ ನಾಯಕನ ಸ್ಥಾನದಿಂದ ತೆಗೆಯುವುದಕ್ಕೆ ಸಂಬಂಧಿಸಿದಂತೆ ಆ ಪಕ್ಷದ ಐವರು ಸಂಸದರು ಇಂದು ಮಧ್ಯಾಹ್ನ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಜೊತೆಗೆ ಸಭೆ ಸೇರಿದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. 

ಬಿಹಾರದಲ್ಲಿ ಎಲ್ ಜೆಪಿ ಜೆಡಿಯು ಸೇರ್ಪಡೆಯಾಗಲಿದೆ ಎಂಬ ವದಂತಿ ಕುರಿತಂತೆ ಪ್ರತಿಕ್ರಿಯಿಸಿದ ಪಾರಸ್, ಎಲ್ ಜೆಪಿ ಆಸ್ತಿತ್ವ ಮುಂದುವರೆಯಲಿದೆ. ಜೆಡಿಯು ಜೊತೆಗೆ ನಾವು ಸೇರುವುದಿಲ್ಲ, ದಿವಂಗತ ರಾಮ್ ವಿಲಾಸ್ ಪಾಸ್ವನ್ ಅವರ ಮಹತ್ವಕಾಂಕ್ಷೆಯನ್ನು ಪೂರ್ಣಗೊಳಿಸುತ್ತೇವೆ. ಆದಾಗ್ಯೂ, ಎನ್ ಡಿಎ ಭಾಗವಾಗಿ ಮುಂದುವರೆಯುವುದಾಗಿ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.