'ಮಹಾ' ಮಳೆ: ನೋಡ ನೋಡ್ತಿದ್ದಂತೆಯೇ ಬೃಹತ್ ಸಿಂಕ್ ಹೋಲ್ ನಲ್ಲಿ ಮುಳುಗಿದ ಕಾರು: ವಿಡಿಯೋ ವೈರಲ್!
ಮಳೆಯ ಅಬ್ಬರಕ್ಕೆ ಮಹಾರಾಷ್ಟ್ರದ ಹಲವು ಪ್ರದೇಶಗಳು ನಲುಗಿವೆ.

ಮುಂಬೈ: ಮಳೆಯ ಅಬ್ಬರಕ್ಕೆ ಮಹಾರಾಷ್ಟ್ರದ ಹಲವು ಪ್ರದೇಶಗಳು ನಲುಗಿವೆ. ಮುಂಬೈ ನಗರದಲ್ಲಿಯೂ ಮಳೆಯ ಅಬ್ಬರ ಜೋರಾಗಿದ್ದು, ಘಾಟ್ಕೋಪರ್ ಪ್ರದೇಶದಲ್ಲಿ ನೋಡ ನೋಡುತ್ತಿದ್ದಂತೆಯೇ ಮಳೆಯ ಅಬ್ಬರಕ್ಕೆ ಬೃಹತ್ ಸಿಂಕ್ ಹೋಲ್ ನಲ್ಲಿ ಕಾರು ಮುಳುಗಿರುವ ವಿಡಿಯೋ ವೈರಲ್ ಆಗತೊಡಗಿದೆ.
ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಬಾವಿ ಇತ್ತು. ಆದರೆ ಅದನ್ನು ಪಾರ್ಕಿಂಗ್ ಉದ್ದೇಶಕ್ಕೆ ಬಳಕೆ ಮಾಡುವ ಕಾರಣದಿಂದ ರಾಮ್ ನಿವಾಸ್ ಸೊಸೈಟಿಯ ನಿವಾಸಿಗಳು ಸಿಮೆಂಟ್ ನಿಂದ ಆ ಪ್ರದೇಶವನ್ನು ಮುಚ್ಚಿ ಪಾರ್ಕಿಂಗ್ ಪ್ರದೇಶವನ್ನಾಗಿ ಮಾಡಿಕೊಂಡಿದ್ದರು. ಮಳೆಯ ತೀವ್ರತೆಗೆ ಸಿಮೆಂಟ್ ಅಸ್ತವ್ಯಸ್ತಗೊಂಡಿದ್ದು ಬೃಹತ್ ಗಾತ್ರದ ಸಿಂಕ್ ಹೋಲ್ ಬಾಯ್ತೆರೆದುಕೊಂಡಿದ್ದು, ಸೊಸೈಟಿಯ ನಿವಾಸಿ ಪಂಕಜ್ ಮೆಹ್ತಾ ಅವರ ಕಾರು ಸಿಂಕ್ ಒಳಗೆ ಮುಳುಗಿ ಹೋಗಿದೆ. ಅದೃಷ್ಟವಶಾತ್ ಕಾರ್ ನಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಪ್ರಾಣ ಅಪಾಯಗಳು ಸಂಭವಿಸಿಲ್ಲ.
ನಾವು ಹೊಣೆಯಲ್ಲ ಎಂದ ಬಿಎಂಸಿ:
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಂಸಿ, ಇದಕ್ಕೆ ತಾನು ಹೊಣೆಯಲ್ಲ ಎಂದು ಹೇಳಿದೆ. ಖಾಸಗಿ ಸೊಸೈಟಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಆದ್ದರಿಂದ ತಾನು ಇದಕ್ಕೆ ಹೊಣೆಯಾಗುವುದಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


