ದೇಶ

ಉತ್ತರಾಖಂಡ ಪ್ರತಿಪಕ್ಷ ನಾಯಕಿ, ಕಾಂಗ್ರೆಸ್ ನ ಹಿರಿಯ ನಾಯಕಿ ಇಂದಿರಾ ಹೃದಯೇಶ್ ನಿಧನ

ಉತ್ತರಾಖಂಡ್ ಪ್ರತಿಪಕ್ಷದ ನಾಯಕಿ ಡಾ. ಇಂದಿರಾ ಹೃದಯೇಶ್ ಅವರು ಇಂದು ದೆಹಲಿಯಲ್ಲಿರುವ ಉತ್ತರಾಖಂಡ ಭವನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಉತ್ತರಾಖಂಡ ಪ್ರತಿಪಕ್ಷ ನಾಯಕಿ, ಕಾಂಗ್ರೆಸ್ ನ ಹಿರಿಯ ನಾಯಕಿ ಇಂದಿರಾ ಹೃದಯೇಶ್ ನಿಧನ
ಇಂದಿರಾ ಹೃದಯೇಶ್
Published On :

ದೆಹಲಿ: ಉತ್ತರಾಖಂಡ್ ಪ್ರತಿಪಕ್ಷದ ನಾಯಕಿ ಡಾ. ಇಂದಿರಾ ಹೃದಯೇಶ್ ಅವರು ಇಂದು ದೆಹಲಿಯಲ್ಲಿರುವ ಉತ್ತರಾಖಂಡ ಭವನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.   

ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ 80 ವರ್ಷದ ಇಂದಿರಾ ಅವರು ದೆಹಲಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡದ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ತಿಳಿಸಿದ್ದಾರೆ. 

1974ರಲ್ಲಿ ಹಲ್ದ್ವಾನಿ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. ನಾಲ್ಕು ದಶಕಗಳ ರಾಜಕೀಯ ಅನುಭವವನ್ನು ಇಂದಿರಾ ಹೊಂದಿದ್ದಾರೆ. 2012ರಿಂದ 2017ರವರೆಗೆ ಹಣಕಾಸು ಸಚಿವರಾಗಿ ಇಂದಿರಾ ಕಾರ್ಯನಿರ್ವಹಿಸಿದ್ದರು. 

ಇಂದಿರಾ ಅವರು ನಿಧನಕ್ಕೆ ಹಿರಿಯ ನಾಯಕರು, ಗಣ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.