ದೇಶ

ಐಎಎಸ್ ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ನಟ ಸೋನು ಸೂದ್ ರಿಂದ ಸ್ಕಾಲರ್ ಶಿಪ್ ಘೋಷಣೆ!

ಬಾಲಿವುಡ್ ನಟ ಸೋನು ಸೂದ್ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾಗಿ ಸ್ಕಾಲರ್ ಶಿಪ್ ಘೋಷಿಸಿದ್ದಾರೆ.

ಐಎಎಸ್ ಆಕಾಂಕ್ಷಿಗಳಿಗೆ ಉಚಿತ ಕೋಚಿಂಗ್ ನಟ ಸೋನು ಸೂದ್ ರಿಂದ ಸ್ಕಾಲರ್ ಶಿಪ್ ಘೋಷಣೆ!
ಸೋನು ಸೂದ್
Published On :

ಕೋವಿಡ್ ಸಾಂಕ್ರಾಮಿಕದ ಮಧ್ಯೆ ಬಾಲಿವುಡ್ ನಟ ಸೋನು ಸೂದ್ ತಮ್ಮ ಸಮಾಜ ಸೇವೆ ಕೆಲಸಕ್ಕೆ ಹೆಸರಾಗಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಅಸಂಖ್ಯಾತ ಕುಟುಂಬಗಳಿಗೆ ಬೆಂಬಲ ನೀಡಿ ಮನೆಮಾತಾಗಿದ್ದಾರೆ. ಆದಾಗ್ಯೂ, ಅವರ ದತ್ತಿ ಉಪಕ್ರಮಗಳು ಕೇವಲಕೋವಿಡ್  ರೋಗಿಗಳಿಗೆ ಅಥವಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಮಾತ್ರ ಸೀಮಿತವಾಗಿಲ್ಲ. ನಟ ಭಾರತೀಯ ಆಡಳಿತ ಸೇವೆಗಳ (ಐಎಎಸ್) ಆಕಾಂಕ್ಷಿಗಳಿಗೆ ಉಚಿತ ತರಬೇತಿಗಾಗಿ ಸ್ಕಾಲರ್ ಶಿಪ್ ಘೋಷಿಸಿದ್ದಾರೆ.

ಯುಪಿಎಸ್ಸಿಯಂತಹ ಪರೀಕ್ಷೆಗಳನ್ನು ಬರೆಯಲು ಐಎಎಸ್ ಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಸ್ಕಾಲರ್ ಶಿಪ್ ಒದಗಿಸುವುದಾಗಿ ನಟ ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ 'ಸಂಭವಂ' ಎಂಬ ಉಪಕ್ರಮದ ಬಗ್ಗೆ ಬರೆದುಕೊಂಡಿದ್ದಾರೆ. "ನೀವು ಐಎಎಸ್ ಗೆ ತಯಾರಿ ನಡೆಸಲು ಬಯಸಿದರೆ, ನಾವು ನಿಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೋನು ಸೂದ್ ಚಾರಿಟಿ ಫೌಂಡೇಶನ್ ವೆಬ್‌ಸೈಟ್ ಪ್ರಕಾರ, ಸ್ಕಾಲರ್ ಶಿಪ್ ಗಾಗಿ ನೋಂದಾಯಿಸಲು ಕೊನೆಯ ದಿನಾಂಕ 2021 ಜೂನ್ 30 ಆಗಿದೆ. 

ಆಕಾಂಕ್ಷಿಗಳು www.soodcharityfoundation.org ಗೆ ಭೇಟಿ ನೀಡುವ ಮೂಲಕ ಫೌಂಡೇಶನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು

ಶನಿವಾರ ಪೋಸ್ಟ್ ಮಾಡಿದ ತನ್ನ ಇತ್ತೀಚಿನ ಟ್ವೀಟ್‌ನಲ್ಲಿ ಸೂದ್ ಹೀಗೆ ಹೇಳಿದ್ದಾರೆ- : "ಜೀವನವು ನಿಮ್ಮನ್ನು ಆರ್ಥಿಕವಾಗಿ ಸಬಲವಾಗಿಸಿದಾಗ ನಿಮ್ಮ ಜೀವನ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಬದಲು . ನಿಮ್ಮ ದಾನದ ಗುಣಮಟ್ಟವನ್ನು ಹೆಚ್ಚಿಸಿ." ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಸೋನು ಆಗಾಗ್ಗೆ ಪ್ರತಿಪಾದಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಮಾರಣಾಂತಿಕ ವೈರಸ್ ವಿರುದ್ಧದ ಯುದ್ಧದಲ್ಲಿ ಪೋಷಕರನ್ನು ಕಳೆದುಕೊಂಡ  ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸಲು ಪಂಜಾಬ್‌ನ ಸಿಟಿ ವಿಶ್ವವಿದ್ಯಾಲಯದೊಂದಿಗಿನ ಸಹಯೋಗವನ್ನು ಅವರು ಘೋಷಿಸಿದ್ದರು.

ಇ-ರಿಕ್ಷಾ ಮತ್ತು ಇತರ ವಿಧಾನಗಳ ಮೂಲಕ ಉದ್ಯೋಗವನ್ನು ಒದಗಿಸುವುದರಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯನ್ನು ನೀಡುವವರೆಗೆ ಜನರಿಗೆ ಸಹಾಯ ಮಾಡಲು ಸೋನು ಹಲವಾರು ಬಗೆಯಲ್ಲಿ ನೆರವಾಗುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.