ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ 719 ವೈದ್ಯರ ಸಾವು: ಐಎಂಎ
ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ದೇಶದಲ್ಲಿ 719 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಶನಿವಾರ ತಿಳಿಸಿದೆ. ಬಿಹಾರದಲ್ಲಿ ಗರಿಷ್ಠ ಸಂಖ್ಯೆಯ ವೈದ್ಯರ ಸಾವು ದಾಖಲಾಗಿದೆ.

ನವದೆಹಲಿ: ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ದೇಶದಲ್ಲಿ 719 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಶನಿವಾರ ತಿಳಿಸಿದೆ. ಬಿಹಾರದಲ್ಲಿ ಗರಿಷ್ಠ ಸಂಖ್ಯೆಯ ವೈದ್ಯರ ಸಾವು ದಾಖಲಾಗಿದೆ.
ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಪ್ರಕಾರ, ಬಿಹಾರದಲ್ಲಿ 111, ದೆಹಲಿಯಲ್ಲಿ 109, ಉತ್ತರ ಪ್ರದೇಶದಲ್ಲಿ 79, ಪಶ್ಚಿಮ ಬಂಗಾಳದಲ್ಲಿ 63, ರಾಜಸ್ಥಾನದಲ್ಲಿ 43 ವೈದ್ಯರು ಮೃತಪಟ್ಟಿದ್ದಾರೆ.
ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರ ಪ್ರದೇಶದಲ್ಲಿ 35 ವೈದ್ಯರು ಸಾವನ್ನಪ್ಪಿದ್ದರೆ, ತೆಲಂಗಾಣದಲ್ಲಿ 36 ಡಾಕ್ಟರ್ ಗಳು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 32, ಕರ್ನಾಟಕದಲ್ಲಿ 9, ಕೇರಳದಲ್ಲಿ 24 ವೈದ್ಯರು ಸಾವನ್ನಪ್ಪಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


