ಆಘಾತಕಾರಿ ಸುದ್ದಿ: ಪೋಷಕರಿಗೂ ತಿಳಿಯದಂತೆ 10 ವರ್ಷ ತನ್ನ ಕೋಣೆಯಲ್ಲಿ ಪ್ರೇಮಿಯನ್ನು ಅಡಗಿಸಿಟ್ಟಿದ್ದ ಕೇರಳದ ವ್ಯಕ್ತಿ
ಪಾಲಕ್ಕಾಡ್ ಬಳಿಯ ಆಯಿಲೂರ್ ಎಂಬ ಹಳ್ಳಿಯ ಜನರು ತಮ್ಮ ಮಧ್ಯೆ ವಾಸಿಸುತ್ತಿದ್ದ ಯುವ ದಂಪತಿಗಳ ಕಥೆಯನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ.

ಪಾಲಕ್ಕಾಡ್: ಪಾಲಕ್ಕಾಡ್ ಬಳಿಯ ಆಯಿಲೂರ್ ಎಂಬ ಹಳ್ಳಿಯ ಜನರು ತಮ್ಮ ಮಧ್ಯೆ ವಾಸಿಸುತ್ತಿದ್ದ ಯುವ ದಂಪತಿಗಳ ಕಥೆಯನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ.
34 ವರ್ಷದ ನೆರೆಮನೆಯ ಯುವತಿ 28 ವರ್ಷದ ಸಜಿತಾಳನ್ನು ಪ್ರೀತಿಸಿದ್ದ ಇದಕ್ಕೆ ಪೋಷಕರ ವಿರೋಧ ವ್ಯಕ್ತವಾಗಿದ್ದರಿಂದ ಸಜಿತಾ ಮನೆ ಬಿಟ್ಟು ಬಂದಿದ್ದಳು. ಅವಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ತಿಳಿಯದ ರಹಮಾನ್ ಆಕೆಯನ್ನು ತನ್ನ ಕೋಣೆಯಲ್ಲೇ ಅಡಗಿಸಿಟ್ಟಿದ್ದಾನೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ.
ಕೋಣೆಗೆ ಹೊರಗೆ ಮತ್ತು ಒಳಗಿನಿಂದ ಲಾಕ್ ಮಾಡಬಹುದಾಗಿತ್ತು. ಸಜಿತಾ ನಿತ್ಯಕರ್ಮಗಳಿಗಾಗಿ ರಾತ್ರಿ ವೇಳೆ ಮಾತ್ರ ಹೊರಬರುತ್ತಿದ್ದಳು. ಮೂರು ತಿಂಗಳ ಹಿಂದೆ ರಹಮಾನ್ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಕಳೆದ ಮಂಗಳವಾರ ಅವರ ಸಹೋದರ ಅವನನ್ನು ಗುರುತಿಸಿದಾಗ ಇಡೀ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ರಹಮಾನ್ ನಡೆದ ಘಟನೆಯನ್ನು ತಿಳಿಸಿದ್ದಾನೆ. ಇನ್ನು ಪೊಲೀಸರು ರಹಮಾನ್ ಮತ್ತು ಸಜಿತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸಜಿತಾ ಅವನೊಂದಿಗೆ ವಾಸಿಸಲು ಬಯಸಿದ್ದರಿಂದ ಅವನ ಜೊತೆ ಹೋಗಲು ಕೋರ್ಟ್ ಅನುಮತಿ ನೀಡಲಾಯಿತು.
ಆಯಿಲೂರ್ನ ಕರತ್ಪರಂಬು ಮೊಹಮ್ಮದ್ ಘಾನಿಯ ಮಗ ರಹಮಾನ್ ಮತ್ತು ಅದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ವೇಲಾಯುಧನ್ ಅವರ ಪುತ್ರಿ ಸಜಿತಾ ಪ್ರೀತಿಸುತ್ತಿದ್ದರು ಎಂದು ನೆಮರಾ ಪೊಲೀಸರು ತಿಳಿಸಿದ್ದಾರೆ. ಕುಟುಂಬಗಳ ವಿರೋಧಕ್ಕೆ ಹೆದರಿ ಸಜಿತಾ ಫೆಬ್ರವರಿ 2, 2010ರಂದು ತನ್ನ ಮನೆ ಬಿಟ್ಟು ಬಂದಿದ್ದಳು. ರಹಮಾನ್ ಸಜಿತಾಳನ್ನು ತನ್ನ ಕೋಣೆಯಲ್ಲಿ ಅಡಗಿಸಿಟ್ಟಿದ್ದು ಅದು ಆತನ ಹೆತ್ತವರಿಗೂ ತಿಳಿದಿರಲಿಲ್ಲ.
ರಹಮಾನ್ ಕೋಣೆಯೊಳಗೆ ಆಕೆಗೆ ಆಹಾರವನ್ನು ನೀಡುತ್ತಿದ್ದನು. ಪೋಷಕರನ್ನು ಹೊರತುಪಡಿಸಿ ರಹಮಾನ್ ಸಹೋದರಿ ಸಹ ಮನೆಯಲ್ಲಿ ವಾಸಿಸುತ್ತಿದ್ದರು. ಇನ್ನು ಸಜಿತಾ ಪೋಷಕರು 10 ವರ್ಷಗಳ ಹಿಂದೆ ಮಗಳು ಕಾಣೆಯಾಗಿದ್ದಾಳೆ ದೂರು ನೀಡಿದ್ದರು. ಈ ದೂರಿನನ್ವಯ ಆಗ ರಹಮಾನ್ ಸೇರಿದಂತೆ ಅನೇಕರನ್ನು ಪೊಲೀಸರು ಪ್ರಶ್ನಿಸಿದ್ದರು.
2021ರ ಮಾರ್ಚ್ 3ರಂದು ರಹಮಾನ್ ಕಾಣೆಯಾಗಿರುವುದಾಗಿ ಪೋಷಕರು ನೆನ್ಮಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ನು ರಹಮಾನ್ ನೆನ್ಮರಾ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವುದನ್ನು ಸಹೋದರ ನೋಡಿದ್ದ. ಇದರಿಂದ ಆತಂಕಗೊಂಡ ರಹಮಾನ್ ಸಮೀಪದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಕೋರಿದರು. ಪೊಲೀಸರು ರಹಮಾನ್ನನ್ನು ತಡೆದು ಠಾಣೆಗೆ ಕರೆದೊಯ್ದರು. ತಾನು ಮತ್ತು ಸಜಿತಾ ಮೂರು ತಿಂಗಳಿನಿಂದ ವಿಥುನಾಶೇರಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ಎಂದು ರಹಮಾನ್ ಪೊಲೀಸರಿಗೆ ತಿಳಿಸಿದ್ದಾರೆ.
ಸಜಿತಾ ಅವರನ್ನು ಠಾಣೆಗೆ ಕರೆಸಲಾಯಿತು. ಪ್ರಶ್ನಿಸಿದಾಗ, ರಹಮಾನ್ ನಡೆದ ಕಥೆಯನ್ನು ವಿವರಿಸಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಮನೆಯಿಂದ ಹೊರಬರಬೇಕು ಎಂದು ರಹಮಾನ್ ಮತ್ತು ಸಜಿತಾ ನಿರ್ಧರಿಸಿದ್ದರು. ಅದರಂತೆ ಬಾಡಿಗೆ ಮನೆ ವಾಸವಾಗಿದ್ದರು. ಆದರೆ ಹೆತ್ತವರಿಗೆ ತಿಳಿಯದಂತೆ ಆಯಿಲೂರ್ನ ಹೆಂಚಿನ ಮನೆಯ ಒಂದು ಸಣ್ಣ ಕೋಣೆಯೊಳಗೆ 10 ವರ್ಷ ಕಾಲ ಹೇಗೆ ಜೀವನ ಸಾಗಿಸಿದ್ದರೂ ಎಂಬುದು ನಂಬಲು ಕಷ್ಟವಾಗಿದೆ ಎಂದು ನೆನ್ಮರಾ ಸಬ್ ಇನ್ಸ್ಪೆಕ್ಟರ್ ಕೆ ನೌಫಲ್ ಹೇಳಿದ್ದಾರೆ.
ಚಿತ್ರಕಲೆ ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ರಹಮಾನ್ ಸಾಂದರ್ಭಿಕವಾಗಿ ಮಾತ್ರ ಕೆಲಸಕ್ಕೆ ಹೋಗುತ್ತಿದ್ದಾಗ ಆದರೆ ರಹಮಾನ್ ಪೋಷಕರು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಸಜಿತಾ ಪೋಷಕರನ್ನು ಪ್ರಶ್ನಿಸಿದಾಗ ಅವರ ತಮ್ಮ ಮಗಳು ಮೃತಪಟ್ಟಿದ್ದಾಗಿ ಭಾವಿಸಿದ್ದರು. ಅಲ್ಲದೆ ಅವಳ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲಾಗಿತ್ತು ಎಂದು ನೌಫಲ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


