ದೇಶ

ಬ್ಲ್ಯಾಕ್ ಫಂಗಸ್: ಕರ್ನಾಟಕಕ್ಕೆ 15,520 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.7 ಲಕ್ಷ ಆಂಫೊಟೆರಿಸಿನ್-ಬಿ ಪೂರೈಕೆ- ಸಚಿವ ಸದಾನಂದಗೌಡ

ಕೋವಿಡ್ ಸಾಂಕ್ರಾಮಿಕದ ನಡುವೆಯೇ ದೇಶಾದ್ಯಂತ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ದೇಶಾದ್ಯಂತ 1.7 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

ಬ್ಲ್ಯಾಕ್ ಫಂಗಸ್: ಕರ್ನಾಟಕಕ್ಕೆ 15,520 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.7 ಲಕ್ಷ ಆಂಫೊಟೆರಿಸಿನ್-ಬಿ ಪೂರೈಕೆ- ಸಚಿವ ಸದಾನಂದಗೌಡ
ಆಂಫೊಟೆರಿಸಿನ್-ಬಿ ಪೂರೈಕೆ
Published On :

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ನಡುವೆಯೇ ದೇಶಾದ್ಯಂತ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ದೇಶಾದ್ಯಂತ 1.7 ಲಕ್ಷ  ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

ಈ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡ ಅವರು ಮಾಹಿತಿ ನೀಡಿದ್ದು, ಕರ್ನಾಟಕಕ್ಕೆ ಮತ್ತೆ 15,520 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.7 ಲಕ್ಷ ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಕರ್ನಾಟಕಕ್ಕೆ ಹೆಚ್ಚುವರಿ 15,520 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿಯನ್ನು ಹಂಚಿಕೆ ಮಾಡಲಾಗಿದ್ದು, ಆ ಮೂಲಕ ಈ ವರೆಗೂ ಕರ್ನಾಟಕಕ್ಕೆ 40,470 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.