ಚತ್ತೀಸ್ ಗಢ: ಇಬ್ಬರು ನಕ್ಸಲರು ಎನ್ ಕೌಂಟರ್ ನಲ್ಲಿ ಹತ
ಓರ್ವ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಚತ್ತೀಸ್ ಗಢದ ಕೊಂಡಗಾಂವ್ ನಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಹತರಾಗಿದ್ದಾರೆ.

ರಾಯ್ ಪುರ: ಓರ್ವ ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಚತ್ತೀಸ್ ಗಢದ ಕೊಂಡಗಾಂವ್ ನಲ್ಲಿ ಭದ್ರತಾ ಪಡೆಗಳ ಗುಂಡೇಟಿಗೆ ಹತರಾಗಿದ್ದಾರೆ.
ಈ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಐಜಿ ಸುಂದರ್ ರಾಜ್ ಪಿ ಈ ಬಗ್ಗೆ ಮಾತನಾಡಿದ್ದು, "ಪೊಲೀಸ್ ಜಿಲ್ಲಾ ಮೀಸಲು ಗಾರ್ಡ್ (ಡಿಆರ್ ಜಿ) ನಕ್ಸಲ್ ವಿರೋಧಿ ಕಾರ್ಯಾಚರಣೆ ಪ್ರಾರಂಭಿಸಿದಾಗ ಭಂಡರಪಾಲ್ ಗ್ರಾಮದ ದಟ್ಟ ಅರಣ್ಯದಲ್ಲಿ ಮಧ್ಯಾಹ್ನ 12:30ಕ್ಕೆ ಗುಂಡಿನ ಚಕಮಕಿ ಪ್ರಾರಂಭವಾಯಿತು" ಎಂದು ಹೇಳಿದ್ದಾರೆ.
ಉತ್ತರ ಕಾನ್ಕೇರ್-ಮಣಿಪುರ್ ವಿಭಾಗದ ಸಮನ್ವಯ ಸಮಿತಿಗೆ ಸೇರಿದ ಮಾವೋವಾದಿಗಳ ಇರುವಿಕೆಯ ಬಗ್ಗೆ ಮಾಹಿತಿ ಪಡೆದು ರಾಜ್ ಪುರ, ಭಂಡಾರ್ಪಾಲ್ ಹಾಗೂ ತಿಮ್ನಾರ್ ನ ಅರಣ್ಯ ಪ್ರದೇಶಗಳಲ್ಲಿ ಮೇ.31 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತು. ಈ ವೇಳೆ ಎನ್ ಕೌಂಟರ್ ನಡೆದಿದೆ.
ಎನ್ ಕೌಂಟರ್ ನಲ್ಲಿ ಇಬ್ಬರು ಮಾವೋವಾದಿಗಳು ಹತರಾಗಿದ್ದು, ಮಹಿಳಾ ಮಾವೋವಾದಿಯೊಬ್ಬರು ಸಾವನ್ನಪ್ಪಿದ್ದಾರೆ. ಒಂದು ಎಸ್ಎಲ್ಆರ್ (ಸೆಲ್ಫ್-ಲೋಡಿಂಗ್ ರೈಫೆಲ್) 303 ರೈಫಲ್ ಹಾಗೂ 12 ಬೋರ್ ರೈಫಲ್ಸ್ ಹಾಗೂ ಬೃಹತ್ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸುಂದರ್ ರಾಜ್ ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ಇನ್ನೂ ಹಲವು ನಕ್ಸಲರು ಇರುವ ಶಂಕೆ ಇದ್ದು ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


