ವಿವಾದಿತ ಗಡಿ ಪ್ರದೇಶದಗಳಿಂದ ಪೊಲೀಸ್ ಸಿಬ್ಬಂದಿ ಹಿಂಪಡೆಯಲು ಅಸ್ಸಾಮ್, ನಾಗಾಲ್ಯಾಂಡ್ ನಿರ್ಧಾರ
ವಿವಾದಿತ ಗಡಿ ಪ್ರದೇಶಗಳಿಂದ ಭದ್ರತಾ ಪಡೆಗಳನ್ನು ಹಿಂಪಡೆಯುವುದಕ್ಕೆ ಅಸ್ಸಾಂ, ನಾಗಾಲ್ಯಾಂಡ್ ನಿರ್ಧರಿಸಿದೆ.

ಗುವಾಹಟಿ: ವಿವಾದಿತ ಗಡಿ ಪ್ರದೇಶಗಳಿಂದ ಭದ್ರತಾ ಪಡೆಗಳನ್ನು ಹಿಂಪಡೆಯುವುದಕ್ಕೆ ಅಸ್ಸಾಂ, ನಾಗಾಲ್ಯಾಂಡ್ ನಿರ್ಧರಿಸಿದೆ.
ಪ್ರಕ್ಷುಬ್ಧ ವಾತಾವರಣವನ್ನು ತಗ್ಗಿಸುವ ನಿಟ್ಟಿನಲ್ಲಿ ಉಭಯ ರಾಜ್ಯಗಳೂ ಈ ನಿರ್ಧಾರಕ್ಕೆ ಬಂದಿವೆ. ಅಂತಾರಾಜ್ಯ ಗಡಿ ವಿವಾದ ಉಂಟಾಗಿದ್ದು, ವಿವಾದಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಈ ನಡೆಯನ್ನು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ. ಉಭಯ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ನಡುವೆ ನಾಗಲ್ಯಾಂಡ್ ನ ದಿಮಾಪುರದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡು ವಿವಾದಿತ ಪ್ರದೇಶದಲ್ಲಿ ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು.
ವಿವಾದಿತ ಎರಡೂ ಪ್ರದೇಶಗಳು ಜೋರ್ಹಟ್ ಜಿಲ್ಲೆಯಲ್ಲಿನ ಡೆಸೊಯ್ ಕಣಿವೆ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದವೆಂದು ಅಸ್ಸಾಂ ಹೇಳುತ್ತಿದೆ. ಆದರೆ ನಾಗಾಲ್ಯಾಂಡ್ ಈ ಎರಡೂ ಪ್ರದೇಶಗಳು ನಾಗಾಲ್ಯಾಂಡ್ ನ ಮೊಕೊಕ್ಚುಂಗ್ ಜಿಲ್ಲೆಯ ತ್ಸುರಾಂಗ್‌ಕಾಂಗ್ ಕಣಿವೆಯ ಭಾಗವೆಂದು ಪ್ರತಿಪಾದಿಸುತ್ತಿದೆ.
ಘರ್ಷಣೆ ತಪ್ಪಿಸಲು, ಶಾಂತಿ ಕಾಪಾಡಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿರ್ಧಾರವನ್ನು ಮುಖ್ಯಕಾರ್ಯದರ್ಶಿಗಳ ನಡುವಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿಗಳನ್ನು ವಿವಾದಿತ ಪ್ರದೇಶದಿಂದ ತಕ್ಷಣವೇ ಉಭಯ ಪಕ್ಷಗಳೂ ವಾಪಸ್ ಕರೆಸಿಕೊಳ್ಳುವುದಕ್ಕೆ ನಿರ್ಧರಿಸಿದ್ದು, 24 ಗಂಟೆಗಳಲ್ಲಿ ಭದ್ರತಾ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ.
ಒಪ್ಪಂದದ ಪ್ರಕಾರ ನಾಗಾಲ್ಯಾಂಡ್ ಹಾಗೂ ಅಸ್ಸಾಂ ಈ ಪ್ರದೇಶದ ಮೇಲೆ ಯುಎವಿ ಮೂಲಕ ಕಣ್ಗಾವಲು ಇರಲಿದೆ. ಶಾಂತಿ ಸ್ಥಾಪನೆಗೆ ಸಹರಿಸಿದ ನಾಗಾಲ್ಯಾಂಡ್ ನ ಸಿಎಂ ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಧನ್ಯವಾದ ತಿಳಿಸಿದ್ದಾರೆ.
ಅಸ್ಸಾಂ ಗಡಿಗಳಲ್ಲಿ ಶಾಂತಿ ಪಾಲನೆಗೆ ಬದ್ಧವಾಗಿದೆ ಹಾಗೂ ಈಶಾನ್ಯದ ಆರ್ಥಿಕ ಸಾಮಾಜಿಕ ಸಮೃದ್ಧಿ ಶ್ರಮಿಸುತ್ತದೆ ಎಂದು ಹಿಮಂತ ಬಿಸ್ವ ಶರ್ಮ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


