ದೇಶ

ದುಬೈನಲ್ಲಿ ಈ ವರ್ಷದಿಂದ "ನೀಟ್" ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೇಂದ್ರ ಸ್ಥಾಪನೆ!

ಈ ವರ್ಷದಿಂದ ದುಬೈನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೇಂದ್ರವನ್ನು ಸ್ಥಾಪಿಸುವುದಾಗಿ ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.

ದುಬೈನಲ್ಲಿ ಈ ವರ್ಷದಿಂದ "ನೀಟ್" ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೇಂದ್ರ ಸ್ಥಾಪನೆ!
ನೀಟ್ ಪರೀಕ್ಷೆ (ಸಾಂಕೇತಿಕ ಚಿತ್ರ)
Published On :

ನವದೆಹಲಿ: ಈ ವರ್ಷದಿಂದ ದುಬೈನಲ್ಲಿ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೇಂದ್ರವನ್ನು ಸ್ಥಾಪಿಸುವುದಾಗಿ ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಭಾರತೀಯ ವಿದ್ಯಾರ್ಥಿ ಸಮುದಾಯಕ್ಕೆ ಸಹಕಾರಿಯಾಗುವುದಕ್ಕೆ ಇದೇ ಮೊದಲ ಬಾರಿಗೆ ಕುವೈಟ್ ನಲ್ಲಿ ಪರೀಕ್ಷೆಗಳನ್ನು ನಡೆಸುವುದಾಗಿ ಈ ತಿಂಗಳ ಪ್ರಾರಂಭದಲ್ಲಿ ಸಚಿವಾಲಯ ಹೇಳಿತ್ತು.  

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಕುವೈಟ್ ನಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ನೀಟ್ ಪರೀಕ್ಷಾ ಕೇಂದ್ರದ ಜೊತೆಗೆ ಈ ವರ್ಷ ದುಬೈ ನಲ್ಲಿ ಮತ್ತೊಂದು ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೆಚ್ ಆರ್ ಡಿ ಕಾರ್ಯದರ್ಶಿ ಅಮಿತ್ ಖರೆ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ. 

ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯ ಸಮುದಾಯಕ್ಕೆ ಈ ಬಗ್ಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು" ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪರೀಕ್ಷೆಗಳನ್ನು ಈ ವರ್ಷ ಹಿಂದಿ, ಪಂಜಾಬಿ, ಅಸ್ಸಾಮಿ, ಬೆಂಗಾಳಿ, ಒಡಿಯಾ, ಗುಜರಾತ್, ಮರಾಠಿ, ತೆಲುಗು, ಮಲಯಾಳಂ, ಕನ್ನಡ, ತಮಿಳು, ಉರ್ದು ಹಾಗೂ ಇಂಗ್ಲೀಶ್, ಉರ್ದುಗಳು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. 

ಭಾಷೆಗಳನ್ನು ಪಂಜಾಬಿ ಹಾಗೂ ಮಲಯಾಳಂ ಎರಡು ಹೊಸ ಭಾಷೆಗಳಾಗಿವೆ. ಆಗಸ್ಟ್ 1 ಕ್ಕೆ ನಿಗದಿಯಾಗಿದ್ದ ಪರೀಕ್ಷೆಗಳು ಸೆಪ್ಟೆಂಬರ್ 12 ಕ್ಕೆ ಮುಂದೂಡಲಾಗಿದೆ. ಪರೀಕ್ಷೆಗಳನ್ನು ನಡೆಸುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಏರಿಕೆ ಮಾಡಲಾಗಿದೆ. 2020 ರಲ್ಲಿ 3,862 ಇದ್ದ ಪರೀಕ್ಷಾ ಕೇಂದ್ರಗಳನ್ನೂ ಈ ಬಾರಿ ಏರಿಕೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.