ದೇಶ

ಶತಮಾನಗಳ ಕಾಲ ನಿರ್ಮಿಸಿದ ದೇಶವನ್ನು ಸೆಕೆಂಡುಗಳಲ್ಲಿ ಅಳಿಸಿ ಸಂಕಷ್ಟಕ್ಕೆ ತಂದಿದ್ದಾರೆ: ರಾಹುಲ್ ಗಾಂಧಿ

ದೇಶಕ್ಕೆ ಕಷ್ಟದ ಸಮಯವನ್ನು ಯಾರು ತಂದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಶತಮಾನಗಳ ಕಾಲ ನಿರ್ಮಿಸಿದ ದೇಶವನ್ನು ಸೆಕೆಂಡುಗಳಲ್ಲಿ ಅಳಿಸಿ ಸಂಕಷ್ಟಕ್ಕೆ ತಂದಿದ್ದಾರೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ನವದೆಹಲಿ: ದೇಶಕ್ಕೆ ಕಷ್ಟದ ಸಮಯವನ್ನು ಯಾರು ತಂದರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗಡಿಯಲ್ಲಿ ಚೀನಾ ಕ್ಯಾತೆ, ಬೆಲೆ ಏರಿಕೆ, ಲಸಿಕೆ ಕೊರತೆ ಮುಂತಾದ ಸಮಸ್ಯೆಗಳನ್ನು ದೇಶಕ್ಕೆ ತಂದಿಟ್ಟವರು ಯಾರು ಎಂದು ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.  ಶತಮಾನಗಳ ಕಾಲ ನಿರ್ಮಿಸಲಾದ ದೇಶವನ್ನು ಸೆಕೆಂಡ್ ಗಳಲ್ಲಿ ಅಳಿಸಿದ್ದಾರೆ. ದೇಶದಲ್ಲಿ ನಿರುದ್ಯೋಗ,  ಬೆಲೆಏರಿಕೆ, ಗಡಿ ರೇಖೆಯಲ್ಲಿ ಸಮಸ್ಯೆ,ರೈತರ ಪ್ರತಿಭಟನೆ ಮುಂತಾದ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ವಿದೇಶ ಹಾಗೂ ರಕ್ಷಣಾ ನೀತಿಯನ್ನು ಭಾರತ ಸರ್ಕಾರವು ದೇಶೀಯ ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದ್ದು, ನಮ್ಮ ದೇಶವನ್ನು ದುರ್ಬಲಗೊಳಿಸಿದೆ. ಭಾರತ ಎಂದಿಗೂ ಇಷ್ಟೊಂದು ಅಭದ್ರ ಸ್ಥಿತಿ ಎದುರಿಸಿರಲಿಲ್ಲ' ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.