2020 ದೆಹಲಿ ಗಲಭೆ ಪ್ರಕರಣ: ತನಿಖೆ 'ಅಪಕ್ವ ಮತ್ತು ನಿಷ್ಪ್ರಯೋಜಕ'; ಪೊಲೀಸರಿಗೆ 25 ಸಾವಿರ ರೂ. ದಂಡ ವಿಧಿಸಿದ ಕೋರ್ಟ್!
2020 ದೆಹಲಿ ಗಲಭೆ ಪ್ರಕರಣದಲ್ಲಿ ತನಿಖೆಯೊಂದನ್ನು ಅಪಕ್ವ ಮತ್ತು ನಿಷ್ಪ್ರಯೋಜಕ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ದೆಹಲಿ ಪೊಲೀಸರಿಗೆ 25,000 ರೂಪಾಯಿ ದಂಡ ವಿಧಿಸಿದೆ.

ದೆಹಲಿ: 2020 ದೆಹಲಿ ಗಲಭೆ ಪ್ರಕರಣದಲ್ಲಿ ತನಿಖೆಯೊಂದನ್ನು ಅಪಕ್ವ ಮತ್ತು ನಿಷ್ಪ್ರಯೋಜಕ ಎಂದು ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ದೆಹಲಿ ಪೊಲೀಸರಿಗೆ 25,000 ರೂಪಾಯಿ ದಂಡ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿನೋದ್ ಯಾದವ್ ಈ ಆದೇಶ ನೀಡಿದ್ದು, ಭಜನ್ಪುರದ ಸ್ಟೇಷನ್ ಹೌಸ್ ಅಧಿಕಾರಿ (ಎಸ್ ಹೆಚ್ಒ) ಹಾಗೂ ಅವರ ಉಸ್ತುವಾರಿ ಅಧಿಕಾರಿಗಳು ಶಾಸನ ವಿಹಿತ ಕರ್ತವ್ಯಗಳಲ್ಲಿ ವಿಫಲರಾಗಿದ್ದು ದಂಡದ ಮೊತ್ತವನ್ನು ಪಡೆಯಬೇಕೆಂದು ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಗಲಭೆ ಸಂದರ್ಭದಲ್ಲಿ ಗುಂಡೇಟಿನಿಂದ ಎಡಭಾಗದ ಕಣ್ಣನ್ನು ಕಳೆದುಕೊಂಡಿದ್ದ ಮೊಹಮ್ಮದ್ ನಾಸಿರ್ ಎಂಬಾತನ ದೂರನ್ನು ಆಧರಿಸಿ ಎಫ್ಐಆರ್ ದಾಖಲಿಸಬೇಕೆಂಬ ಮ್ಯಾಜಿಸ್ಟೀರಿಯಲ್ ಕೋರ್ಟ್ ಆದೇಶವನ್ನು ಪೊಲೀಸರು ಪ್ರಶ್ನಿಸಿದ್ದರು.
ತನಿಖಾಧಿಕಾರಿಗಳು, ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಹೊಸ ಎಫ್ಐಆರ್ ನ ಅಗತ್ಯವಿಲ್ಲವೆಂದೂ, ಮೊಹಮ್ಮದ್ ನಾಸಿರ್ ಎಂಬಾತನ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿರುವವರು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿ ಇರದ ಕಾರಣ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲವೆಂದೂ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪೊಲೀಸರ ತನಿಖೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು ಪೊಲೀಸ್ ತನಿಖೆಯಲ್ಲಿ ಪರಿಣಾಮಕಾರಿತ್ವ ಹಾಗೂ ನ್ಯಾಯದ ಕೊರತೆ ಕಾಣುತ್ತಿದ್ದು, ತನಿಖೆಯನ್ನು ಪ್ರಾಸಂಗಿಕ, ಅಪಕ್ವ ಮತ್ತು ನಿಷ್ಪ್ರಯೋಜಕ ವಿಧಾನದಲ್ಲಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಂಗದ ಗಮನದಲ್ಲಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದಕ್ಕಾಗಿ ಈ ಆದೇಶದ ಪ್ರತಿಯನ್ನು ದೆಹಲಿಯ ಪೊಲೀಸ್ ಆಯುಕ್ತರಿಗೆ ಕಳಿಸಬೇಕೆಂದೂ ಕೋರ್ಟ್ ಇದೇ ವೇಳೆ ಸೂಚನೆ ನೀಡಿದೆ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರವನ್ನು ಪಡೆಯುವುದಕ್ಕೆ ಮೊಹಮ್ಮದ್ ನಾಸಿಸ್ ಮುಕ್ತರಾಗಿದ್ದು, ಆತನ ದೂರನ್ನು ಆಧರಿಸಿ ಪ್ರತ್ಯೇಕ ಎಫ್ಐಆರ್ ನ್ನು ದಾಖಲಿಸಬೇಕು ಎಂದು ಕೋರ್ಟ್ ಹೇಳಿದೆ.
ಅರ್ಜಿದಾರರ ಪರ ವಕೀಲ ಮೆಹ್ಮೂದ್ ಪ್ರಾಚ ವಾದ ಮಂಡಿಸಿ, ನರೇಶ್ ತ್ಯಾಗಿ ಎಂಬಾತ ನಾಸಿರ್ ಮೇಲೆ ಗುಂಡು ಹಾರಿಸಿದ್ದ ಪರಿಣಾಮ ಎಡಭಾಗದ ಕಣ್ಣಿದ ದೃಷ್ಟಿ ಕಳೆದುಕೊಂಡಿದ್ದಾನೆ, ಮನವಿಯ ಹೊರತಾಗಿಯೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಪರಿಣಾಮ ನ್ಯಾಯಾಂಗದ ಮೊರೆ ಬಂದಿದ್ದೇವೆ ಎಂದು ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


