ಕೋವಿಡ್ ಪ್ರಕರಣಗಳ ಹೆಚ್ಚಳ: ನಟ ಸುನೀಲ್ ಶೆಟ್ಟಿಗೆ ಸೇರಿದ ಕಟ್ಟಡ ಸೀಲ್ ಮಾಡಿದ ಬಿಎಂಸಿ
ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಕಟ್ಟಡವನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಸೀಲ್ ಮಾಡಿದೆ.

ಮುಂಬೈ: ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಕಟ್ಟಡವನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಸೀಲ್ ಮಾಡಿದೆ.
ದಕ್ಷಿಣ ಮುಂಬೈಯ ಅಲ್ಟಾಮೌಂಟ್ ರಸ್ತೆಯ ಪೃಥ್ವಿ ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಸುನೀಲ್ ಶೆಟ್ಟಿ ವಾಸಿಸುತ್ತಿದ್ದಾರೆ. ಆದರೆ, ಈ ಕಟ್ಟಡದಲ್ಲಿ 5ಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆ ಕಟ್ಟಡವನ್ನು ಬಿಎಂಸಿ ಸೀಲ್ ಮಾಡಿದೆ.
ಪೃಥ್ವಿ ಅಪಾರ್ಟ್ ಮೆಂಟ್ ಸೀಲ್ ಮಾಡಲಾಗಿದ್ದು, ಜನರಿಗೆ ಬರಲು ಅವಕಾಶ ಇರುವುದಿಲ್ಲ. ಈಗಿನಿಂದ ಕಟ್ಟಡದ ಹೊರಗಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದ್ದರಿಂದ ಯಾವೊಬ್ಬ ವ್ಯಕ್ತಿಯನ್ನು ಕಟ್ಟಡದ ಹೊರಗಡೆಯ ಆವರಣಕ್ಕೆ ಕರೆಯುವುದಕ್ಕೆ ಆಗುವುದಿಲ್ಲ ಎಂದು ಬಿಎಂಸಿಯ ಸಹಾಯಕ ಕಮೀಷನರ್ ಪ್ರಶಾಂತ್ ಗಾಯಕ್ ವಾಡ್ ಸೋಮವಾರ ತಿಳಿಸಿದ್ದಾರೆ.
ಪೃಥ್ವಿ ಅಪಾರ್ಟ್ ಮೆಂಟ್ ನ 18ನೇ ಅಂತಸ್ತಿನಲ್ಲಿ ನಟ ಸುನೀಲ್ ಶೆಟ್ಟಿಯ ಇಡೀ ಕುಟುಂಬ ವಾಸಿಸುತ್ತಿದೆ. ಈಗ ಸುನೀಲ್ ಶೆಟ್ಟಿಯ ಇಡೀ ಕುಟುಂಬ ಸುರಕ್ಷಿತವಾಗಿದೆ. ಅವರಿಗೆ ಏನೂ ಆಗಲ್ಲ. ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಬಿಎಂಸಿ ಮಾರ್ಗಸೂಚಿ ಅನ್ವಯ 5ಕ್ಕಿಂತ ಹೆಚ್ಚಿನ ಪ್ರಕರಣಗಳು ಕಂಡುಬಂದ ಯಾವುದೇ ಕಟ್ಟಡವನ್ನು ಸೂಕ್ಷ್ಮ ಕಂಟೈನ್ ಮೆಂಚ್ ವಲಯ ಎಂದು ಘೋಷಿಸಿ ಸೀಲ್ ಮಾಡಲಾಗುವುದು ಎಂದು ಗಾಯಕ್ ವಾಡ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


