ಕೇರಳ: 22 ತಿಂಗಳ ಮಗು ಸೇರಿದಂತೆ ಮತ್ತೆ ಮೂವರಲ್ಲಿ ಝಿಕಾ ವೈರಸ್ ಪತ್ತೆ
ಕೇರಳದಲ್ಲಿ ಝಿಕಾ ವೈರಸ್ ನ ಆರ್ಭಟ ಮುಂದುವರೆದಿದ್ದು, ಇಂದು ಮತ್ತೆ ಮೂವರಲ್ಲಿ ವೈರಸ್ ಸೋಂಕು ದೃಢಪಟ್ಟಿದೆ.

ತಿರುವನಂತಪುರಂ: ಕೇರಳದಲ್ಲಿ ಝಿಕಾ ವೈರಸ್ ನ ಆರ್ಭಟ ಮುಂದುವರೆದಿದ್ದು, ಇಂದು ಮತ್ತೆ ಮೂವರಲ್ಲಿ ವೈರಸ್ ಸೋಂಕು ದೃಢಪಟ್ಟಿದೆ.
ಅಂಬೆಗಾಲಿಡುವ 22 ತಿಂಗಳ ಮಗು ಸೇರಿದಂತೆ ಇನ್ನೂ ಮೂವರು ಜಿಕಾ ವೈರಸ್ ಸೋಂಕಿಗೆ ಒಳಗಾಗಿದ್ದು, 22 ತಿಂಗಳ ಮಗು, 46 ವರ್ಷದ ವ್ಯಕ್ತಿ ಮತ್ತು 29 ವರ್ಷದ ಆರೋಗ್ಯ ಕಾರ್ಯಕರ್ತರಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ. ಆ ಮೂಲಕ ಝಿಕಾ ವೈರಸ್ ಗೆ ತುತ್ತಾದವರ ಸಂಖ್ಯೆ ಕೇರಳದಲ್ಲಿ 18 ಕ್ಕೆ ಏರಿಕೆಯಾಗಿದೆ.
ಕೇರಳದ ತಿರುವನಂತಪುರಂ, ತ್ರಿಶೂರ್ ಮತ್ತು ಕೋಝಿಕೋಡ್ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ಅಲಪ್ಪುಳದಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಘಟಕದಲ್ಲಿ ಪರೀಕ್ಷಾ ಸೌಲಭ್ಯಗಳನ್ನು ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.
ಕೇರಳ ರಾಜ್ಯದಲ್ಲಿ 18 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಎರಡು ಬ್ಯಾಚ್‌ಗಳಲ್ಲಿ ಪರೀಕ್ಷೆಗೆ ಕಳುಹಿಸಲಾದ 27 ಮಾದರಿಗಳಲ್ಲಿ 26 ಮಾದರಿಗಳು ನೆಗೆಟಿವ್ ಬಂದಿದೆ. ಎಂಟು ಸ್ಯಾಂಪಲ್ ಗಳೊಂದಿಗೆ ಮೂರನೇ ಬ್ಯಾಚ್‌ನಲ್ಲಿ ಮೂವರು ಭಾನುವಾರ ಸೋಂಕಿಗೆ ತುತ್ತಾಗಿರುವ ಕುರಿತು ವರದಿ ಲಭ್ಯವಾಗಿದೆ ಎಂದು ಜಾರ್ಜ್ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ಪ್ರಕಾರ, ಎನ್‌ಐವಿ ಪುಣೆಯಿಂದ 2,100 ಪರೀಕ್ಷಾ ಕಿಟ್‌ಗಳನ್ನು ತರಿಸಿಕೊಳ್ಳಲಾಗಿದ್ದು, ಈ ಪೈಕಿ 1,000 ಕಿಟ್ ಗಳನ್ನು ತಿರುವನಂತಪುರಂಗೆ, ತಲಾ 300 ಕಿಟ್ ಗಳನ್ನು ತ್ರಿಶೂರ್ ಮತ್ತು ಕೋಝಿಕೋಡ್‌ಗೆ, 500 ಕಿಟ್ ಗಳನ್ನು ಆಲಪ್ಪುಳದಲ್ಲಿರುವ ಎನ್‌ಐವಿಗೆ ನೀಡಲಾಗಿದೆ.
'ತಿರುವನಂತಪುರಂ ವೈದ್ಯಕೀಯ ಕಾಲೇಜು 500 ಟ್ರಿಪಲ್ಕ್ಸ್ ಕಿಟ್ ಅನ್ನು ಪಡೆದುಕೊಂಡಿದೆ, ಇದು ಡೆಂಗ್ಯೂ ವೈರಸ್, ಚಿಕೂನ್‌ಗುನ್ಯಾ ವೈರಸ್ ಮತ್ತು ಝಿಕಾ ವೈರಸ್ ಮತ್ತು ಝಿಕಾ ವೈರಸ್ ಅನ್ನು ಮಾತ್ರ ಪತ್ತೆಹಚ್ಚಬಲ್ಲ 500 ಸಿಂಗಲ್‌ಪ್ಲೆಕ್ಸ್ ಕಿಟ್‌ಗಳನ್ನು ಆರ್‌ಎನ್‌ಎಯನ್ನು ಏಕಕಾಲದಲ್ಲಿ ಪತ್ತೆಹಚ್ಚಲು ಮತ್ತು ಪ್ರತ್ಯೇಕಿಸಲು ಅನುವು ಮಾಡಿಕೊಡುತ್ತದೆ" ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಝಿಕಾ ವೈರಸ್ ಸೋಂಕಿಗೆ ಒಳಗಾಗಿದೆ ಎಂದು ಶಂಕಿಸಲಾಗಿರುವವರ ರಕ್ತದ ಮಾದರಿಗಳನ್ನು ಸಂಗ್ರಹಿಸುವಂತೆ ಪುಣೆ ಎನ್ಐವಿ ಆರೋಗ್ಯ ಇಲಾಖೆಗೆ ಸೂಚಿಸಿದೆ.
ಅಂತೆಯೇ ರಾಜ್ಯದ ಹೆಚ್ಚಿನ ಲ್ಯಾಬ್‌ಗಳಿಗೆ ಝಿಕಾ ವೈರಸ್‌ಗೆ ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯದಲ್ಲಿ 27 ಸರ್ಕಾರಿ ಲ್ಯಾಬ್‌ಗಳಿವೆ, ಅದು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಬಲ್ಲದು ಮತ್ತು ಹೆಚ್ಚಿನ ಪರೀಕ್ಷಾ ಕಿಟ್‌ಗಳು ರಾಜ್ಯವನ್ನು ತಲುಪುತ್ತಿದ್ದಂತೆ, ಎನ್‌ಐವಿಯಿಂದ ಅನುಮತಿ ಪಡೆದ ನಂತರ ಝಿಕಾ ವೈರಸ್‌ಗೆ ಪರೀಕ್ಷೆ ನಡೆಸಲು ನಾವು ಈ ಲ್ಯಾಬ್‌ಗಳನ್ನು ಬಳಸುತ್ತೇವೆ. ಆ ರೋಗಿಗಳಿಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಜ್ವರ, ಚರ್ಮದ ಮೇಲೆ ದದ್ದುಗಳು ಮತ್ತು ಮೈ ಕೈ ನೋವು ಪರೀಕ್ಷಿಸಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


