ಹಣ ನೀಡಲು ನಿರಾಕರಿಸಿದ ಪೋಷಕರು: ಲಿಂಗಪರಿವರ್ತಿತ ವ್ಯಕ್ತಿ ಸೇರಿ ಇಬ್ಬರಿಂದ ಹೆಣ್ಣು ಮಗುವಿನ ಕೊಲೆ!
ಮೂರು ತಿಂಗಳ ಹೆಣ್ಣು ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಕಾಲುವೆಗೆ ಎಸೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದ್ದು ಅವರಲ್ಲಿ ಓರ್ವ ಲಿಂಗಪರಿವರ್ತಿತ ವ್ಯಕ್ತಿ ಎನ್ನಲಾಗಿದೆ.

ಮುಂಬೈ: ಮೂರು ತಿಂಗಳ ಹೆಣ್ಣು ಮಗುವನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿ ಕಾಲುವೆಗೆ ಎಸೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದ್ದು ಅವರಲ್ಲಿ ಓರ್ವ ಲಿಂಗಪರಿವರ್ತಿತ ವ್ಯಕ್ತಿ ಎನ್ನಲಾಗಿದೆ.
ಮಗುವಿನ ಪೋಷಕರು ಸ್ವಲ್ಪ ಹಣ, ತೆಂಗಿನಕಾಯಿ ಮತ್ತು ಸೀರೆ ನೀಡಬೇಕೆಂಬ ತಮ್ಮ ಬೇಡಿಕೆ ಈಡೇರಿಸದ ಕಾರಣ ಆರೋಪಿಗಳು ಮಗುವನ್ನು ಎಸೆದಿರುವುದಾಗಿ ದಕ್ಷಿಣ ಮುಂಬೈ, ಪೊಲೀಸರು ಹೇಳಿದ್ದಾರೆ.
ಗುರುವಾರ ಸಂಜೆ ನಾಪತ್ತೆಯಾಗಿದ್ದ ಮಗುವಿನ ಶವವನ್ನು ಕಾಲುವೆಯಲ್ಲಿ ಗುರುತಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ,ಯೊಬ್ಬ ಲಿಂಗಪರಿವರ್ತಿತನಾಗಿದ್ದು ಮಗುವನ್ನು ಮನೆಗೆ ಹಿಂದಿರುಗಿಸಲು ಭೇಟಿ ನೀಡಿದ್ದಾಳೆ. ಆ ವೇಳೆ ಪೋಷಕರಿಂದ ಸ್ವಲ್ಪ ನಗದು, ತೆಂಗಿನಕಾಯಿ ಮತ್ತು ಸೀರೆಯನ್ನು ಉಡುಗೊರೆಯಾಗಿ ಕೋರಿದ್ದಾಳೆ. ಆದರೆ ಮಗುವಿನ ಪೋಷಕರಿ ಇದನ್ನು ನೀಡಲು ಒಪ್ಪಿರಲಿಲ್ಲ. ತೀವ್ರ ವಾಗ್ವಾದದ ಬಳಿಕ , ಆರೋಪಿ ಗುರುವಾರ ಸಂಜೆ ಮಗುವನ್ನು ಅಪಹರಿಸಿ ಕಾಲುವೆಗೆ ಎಸೆದಿದ್ದಾಳೆ. ಮಗುವಿನ ಕುಟುಂಬವು ಮಗುವಿಗಾಗಿ ಹುಡುಕಿ ಬಳಿಕ ಪೊಲೀಸರಿಗೆ ದೂರು ನೀಡಿದೆ.
ಆರಂಭದಲ್ಲಿ, ಅಪಹರಣದ ಪ್ರಕರಣ ದಾಖಲಾಗಿದ್ದರೂ, ಮಗುವಿನ ಶವವನ್ನು ವಶಕ್ಕೆ ಪಡೆದ ನಂತರ ಸೆಕ್ಷನ್ 302 (ಕೊಲೆ) ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಗಳ ಬೇಟೆಯಾಡಿ ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


