ದೇಶ

ಕೇಂದ್ರ ಸಂಪುಟ ಪುನರ್ ರಚನೆ: 11 ಸಚಿವರಿಗೆ ಕೊಕ್, 43 ಹೊಸ ಸದಸ್ಯರಿಗೆ ಅವಕಾಶ

ಇಂದು ಸಂಜೆ ನಡೆಯಲಿರುವ ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ 11 ಸಚಿವರಿಗೆ ಕೊಕ್ ನೀಡಲಾಗುತ್ತಿದ್ದು, ಹೊಸದಾಗಿ 43 ಹೊಸ ಸದಸ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ.

ಕೇಂದ್ರ ಸಂಪುಟ ಪುನರ್ ರಚನೆ: 11 ಸಚಿವರಿಗೆ ಕೊಕ್, 43 ಹೊಸ ಸದಸ್ಯರಿಗೆ ಅವಕಾಶ
ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್
Published On :

ನವದೆಹಲಿ: ಇಂದು ಸಂಜೆ ನಡೆಯಲಿರುವ ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ 11 ಸಚಿವರಿಗೆ ಕೊಕ್ ನೀಡಲಾಗುತ್ತಿದ್ದು, ಹೊಸದಾಗಿ 43 ಹೊಸ ಸದಸ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆ ಸಜ್ಜಾಗಿದೆ.

ಡಿ.ವಿ.ಸದಾನಂದ ಗೌಡ, ಡಾ. ಹರ್ಷವರ್ಧನ್, ರಾವು ಸಾಹೇಬ್ ದಾನ್ವೆ ಪಾಟೀಲ್,  ಬಾಬುಲ್ ಸುಪ್ರಿಯೋ, ಪ್ರತಾಪ್ ಸಾರಂಗಿ, ರಮೇಶ್ ಪೋಖ್ರಿಯಾಲ್, ದೇಬಾಶ್ರೀ ಚೌಧುರಿ, ಸಂತೋಷ್ ಗಂಗ್ವಾರ್, ಥಾವರ್ ಚಂದ್ ಗೆಹ್ಲೋಟ್, ಸಂಜಯ್ ಶಮರಾವ್ ಧೋತ್ರೆ ಮತ್ತು ರತ್ತನ್  ಲಾಲ್ ಕಟಾರಿಯಾ ಸೇರಿದಂತೆ 11 ಮಂದಿಯನ್ನು  ಸಂಪುಟದಿಂದ ಕೈಬಿಡಲಾಗುತ್ತಿದೆ. 

ಹೆಚ್ಚಿನ ಸಂಖ್ಯೆಯ ಎಸ್ ಸಿ, ಎಸ್ ಟಿ ಪ್ರತಿನಿಧಿಸುವ ಸಂಸದರು ಸೇರಿದಂತೆ 43 ಹೊಸ ಸದಸ್ಯರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಪುನರ್ ರಚನೆ ನಂತರ ಪರಿಶಿಷ್ಟ ಸಮುದಾಯದಿಂದ 12 ಸದಸ್ಯರು ಮತ್ತು ಪರಿಶಿಷ್ಟ ಪಂಗಡದಿಂದ 8 ಸದಸ್ಯರು ಸಂಪುಟ ಸೇರಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಕ್ಯಾಬಿನೆಟ್ ವಿಸ್ತರಣೆಯ ನಂತರ, ಮೋದಿ ಸರ್ಕಾರ 27 ಒಬಿಸಿ ನಾಯಕರನ್ನು ಹೊಂದುವ ನಿರೀಕ್ಷೆಯಿದೆ. ಅದರಲ್ಲಿ ಐವರು ಕ್ಯಾಬಿನೆಟ್ ನಲ್ಲಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.