ದೇಶ

ಲಕ್ಷದ್ವೀಪದಲ್ಲಿ ಕಾಂಗ್ರೆಸ್ ಸಂಸದರಿಗೆ ಪ್ರವೇಶ ನಿರಾಕರಣೆ!

ಲಕ್ಷದ್ವೀಪದಲ್ಲಿ ಕಾಂಗ್ರೆಸ್ ಸಂಶದರಿಗೆ ಸ್ಥಳೀಯ ಆಡಳಿತ ಪ್ರವೇಶವನ್ನು ನಿರಾಕರಣೆ ಮಾಡಿದೆ.

ಲಕ್ಷದ್ವೀಪದಲ್ಲಿ ಕಾಂಗ್ರೆಸ್ ಸಂಸದರಿಗೆ ಪ್ರವೇಶ ನಿರಾಕರಣೆ!
ಲಕ್ಷದ್ವೀಪ (ಸಾಂಕೇತಿಕ ಚಿತ್ರ)
Published On :

ನವದೆಹಲಿ: ಲಕ್ಷದ್ವೀಪದಲ್ಲಿ ಕಾಂಗ್ರೆಸ್ ಸಂಶದರಿಗೆ ಸ್ಥಳೀಯ ಆಡಳಿತ ಪ್ರವೇಶವನ್ನು ನಿರಾಕರಣೆ ಮಾಡಿದೆ. 

ಕೇಂದ್ರಾಡಳಿತ ಪ್ರದೇಶಕ್ಕೆ ಕಾಂಗ್ರೆಸ್ ಸಂಸದರು ಭೇಟಿ ನೀಡಿದರೆ ಶಾಂತಿಯುತ ವಾತಾವರಣ ಹಾಳಾಗಲಿದೆ ಎಂಬ ಕಾರಣ ನೀಡಿ ಲಕ್ಷದ್ವೀಪ ಆಡಳಿತ ಕಾಂಗ್ರೆಸ್ ಸಂಸದರಾದ ಹಿಬಿ ಈಡನ್ ಹಾಗೂ ಟಿ.ಎನ್.ಪ್ರತಾಪನ್ ಅವರ ಭೇಟಿ ಅರ್ಜಿಯನ್ನು ತಿರಸ್ಕರಿಸಿದೆ.

ಸಂಸದರ ಭೇಟಿ ಉದ್ದೇಶಪೂರ್ವಕವಾಗಿ ಶಾಂತಿಯನ್ನು ಕದಡುವ ಪ್ರಯತ್ನವಾಗಿದ್ದು, ಕೋವಿಡ್-19 ಪ್ರಕರಣಗಳು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಡಳಿತ ಸಮರ್ಥನೆ ನೀಡಿದೆ.

ಸಂಸದರ ಭೇಟಿಯ ಉದ್ದೇಶ, ದ್ವೀಪ ಜನರಿಗೆ ಹೊಸ ಆಡಳಿತದಿಂದ ಜನರ ಸಮಸ್ಯೆಗೆ ಆಲಿಸುವುದಕ್ಕಾಗಿಯಾಗಿದ್ದು, ಇದು ರಾಜಕೀಯ ಕ್ರಮ ಎಂದೆನಿಸುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ. ಕಳೆದ ತಿಂಗಳು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಜಾರಿಗೆ ತಂದಿದ್ದ ಸುಧಾರಣೆಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.