ಮಹಾತ್ಮ ಗಾಂಧಿ ನಿಂಧಿಸಿದ್ದ ಹಿಂದೂ ಸ್ವಾಮೀಜಿ ವಿರುದ್ಧ ಕೇಸ್ ದಾಖಲು
ಮಹಾತ್ಮ ಗಾಂಧಿ ವಿರುದ್ಧಅವಹೇಳನಾಕಾರಿ ಪದ ಬಳಸಿದ್ದಕ್ಕಾಗಿ ಸ್ವಾಮೀಜಿ ಕಾಳಿಚರಣ್ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್ ಬುಧವಾರ ಥಾಣೆಯಲ್ಲಿ ಪೊಲೀಸ್ ಕೇಸ್ ದಾಖಲಿಸಿದ್ದಾರೆ.

ಮುಂಬೈ: ಮಹಾತ್ಮ ಗಾಂಧಿ ವಿರುದ್ಧಅವಹೇಳನಾಕಾರಿ ಪದ ಬಳಸಿದ್ದಕ್ಕಾಗಿ ಸ್ವಾಮೀಜಿ ಕಾಳಿಚರಣ್ ಮಹಾರಾಜ್ ವಿರುದ್ಧ ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್ ಬುಧವಾರ ಥಾಣೆಯಲ್ಲಿ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
ಛತ್ತೀಸ್ ಗಢದಲ್ಲಿ ಡಿಸೆಂಬರ್ 26 ರಂದು ನಡೆದ ಧರ್ಮ ಸಂಸದ್ ನಲ್ಲಿ ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದ ನಾಥೂರಾಂ ಗೂಡ್ಸೆ ಅವರನ್ನು ಹೊಗಳುವಾಗ ಕಾಳಿ ಚರಣ್ ಮಹಾತ್ಮ ಗಾಂಧೀಜಿ ವಿರುದ್ದ ಅವಹೇಳನಾಕಾರಿ ಪದ ಬಳಸಿದ್ದರು.
ನೌಪದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವದ್, ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ವಿರುದ್ಧ ಕಾಳಿಚರಣ್ ಸ್ವಾಮೀಜಿ ಬಳಸಿರುವ ಪದ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
ಕೋಮು ಪ್ರಚೋದನೆ ಮತ್ತಿತರ ದುರುದ್ದೇಶ ಪೂರಿತ ಉದ್ದೇಶ ಮತ್ತು ಐಪಿಸಿ ಸೆಕ್ಷನ್ 294,295ಎ. 298, 505 (2) ಮತ್ತು 506(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ನೌಪದ್ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


