ದೇಶ

ಭೀಕರ ದೃಶ್ಯ: 8ನೇ ತರಗತಿ ವಿದ್ಯಾರ್ಥಿನಿಗೆ 13 ಸೆಕೆಂಡ್ ನಲ್ಲಿ 8 ಬಾರಿ ಚಾಕು ಇರಿದ ಯುವಕ, ವಿಡಿಯೋ!

ಎಂಟನೇ ತರಗತಿ ವಿದ್ಯಾರ್ಥಿನಿಗೆ ಯುವಕನೋರ್ವ ಸತತ ಎಂಟು ಭಾರಿ ಚಾಕು ಇರಿತ ನಡೆಸಿರುವ ಭೀಖರ ಘಟನೆ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಭೀಕರ ದೃಶ್ಯ: 8ನೇ ತರಗತಿ ವಿದ್ಯಾರ್ಥಿನಿಗೆ 13 ಸೆಕೆಂಡ್ ನಲ್ಲಿ 8 ಬಾರಿ ಚಾಕು ಇರಿದ ಯುವಕ, ವಿಡಿಯೋ!
ಪ್ರತ್ಯಕ್ಷ ದೃಶ್ಯ
Published On :

ಗೋಪಾಲ್ಗಂಜ್(ಬಿಹಾರ): ಎಂಟನೇ ತರಗತಿ ವಿದ್ಯಾರ್ಥಿನಿಗೆ ಯುವಕನೋರ್ವ ಸತತ ಎಂಟು ಭಾರಿ ಚಾಕು ಇರಿತ ನಡೆಸಿರುವ ಭೀಖರ ಘಟನೆ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.

 ಈ ಘಟನೆ ಡಿಸೆಂಬರ್ 19 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಶಾಲೆಯಿಂದ ಮನೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ವಾಪಾಸ್ಸಾಗುವಾಗ ಈ ಘಟನೆ ನಡೆದಿದೆ. ಆರೋಪಿಯು ಏಕಾಏಕಿ ದಾಳಿ ಮಾಡಿ 13 ಸೆಕೆಂಡುಗಳಲ್ಲಿ 8 ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗೊಂಡಿದೆ.

ರಕ್ತದ ಮಡುವಿನಲ್ಲಿದ್ದ ವಿದ್ಯಾರ್ತಿನಿಯನ್ನ ಕೂಡಲೆ ಗೋಪಾಲ್ಗಂಜ್ ನಲ್ಲಿರುವ ಆಸ್ಪತ್ರಗೆ ದಾಖಲಿಸಲಾಗಿದೆ. ನಂತರ ಉತ್ತಮ ಚಿಕಿತ್ಸೆಗಾಗಿ ಪಟ್ನಾದ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.