ಮತದಾರರ ಪಟ್ಟಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಚುನಾವಣಾ ಅಕ್ರಮಕ್ಕೆ ತಡೆ: ಸರ್ಕಾರಿ ಮೂಲಗಳು
ದೀರ್ಘ ಸಮಯದಿಂದ ಚಿಂತನೆಯ ಹಂತದಲ್ಲಿರುವ ಹಲವು ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಲು ನೂತನ ಮತದಾನ ಮಸೂದೆ ತಿದ್ದುಪಡಿ ನೆರವಾಗಲಿದೆ.

ನವದೆಹಲಿ: ಮತದಾರರ ಪಟ್ಟಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವ ತಿದ್ದುಪಡಿ ಮಸೂದೆ ಜಾರಿಯಿಂದ ನಕಲಿ ಮತದಾರರಿಗೆ ಕಡಿವಾಣ ಬೀಳುವುದಾಗಿ ಬಿಜೆಪಿ ಸರ್ಕಾರ ತಿಳಿಸಿದೆ.
ಒಬ್ಬ ವ್ಯಕ್ತಿ ಹೆಸರಲ್ಲಿ ಹಲವೆಡೆ ಮತದಾರರ ಪಟ್ಟಿಗೆ ಅರ್ಜಿ ಸಲ್ಲಿಸುವುದಕ್ಕೆ ಈ ಮಸೂದೆಯಿಂದ ಕಡಿವಾಣ ಬೀಳುವುದಾಗಿ ಸರ್ಕಾರ ಆಶಾಭಾವ ವ್ಯಕ್ತಪಡಿಸಿದೆ. ದೀರ್ಘ ಸಮಯದಿಂದ ಚಿಂತನೆಯ ಹಂತದಲ್ಲಿರುವ ಹಲವು ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಲು ನೂತನ ಮತದಾನ ಮಸೂದೆ ತಿದ್ದುಪಡಿ ನೆರವಾಗಲಿದೆ.
ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿಚ್ಛಿಸುವವರ ಅರ್ಜಿ ಆಧಾರ್ ಇಲ್ಲವೆಂಬ ಕಾರಣಕ್ಕೆ ತಿರಸ್ಕೃತಗೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.
ಮತದಾರರು ತಾವು ವಾಸಸ್ಥಳ ಬದಲಾಯಿಸಿದಾಗಲೆಲ್ಲ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸುತ್ತಾರೆ. ಹೀಗಾಗಿ ಅವರ ಹೆಸರು ಹಲವು ಕ್ಷೇತ್ರಗಳಲ್ಲಿ ಪತ್ತೆಯಾಗುವ ಸಾಧ್ಯತೆ ಇರುತ್ತದೆ. ನೂತನ ವ್ಯವಸ್ಥೆಯಿಂದ ಚುನಾವಣಾ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ತಾಯಿಯ ಗರ್ಭ, ಸ್ಮಶಾನ ಮಾತ್ರ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳ ಎಂದು ಬರೆದು ಅಪ್ರಾಪ್ತೆ ಆತ್ಮಹತ್ಯೆಗೆ ಶರಣು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


