ದೇಶ

ಬೂಸ್ಟರ್ ಡೋಸ್: ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಅನುಮತಿ ಕೋರಿಕೆ

ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3 ನೇ ಹಂತದ ಪ್ರಯೋಗಕ್ಕೆ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ದಿಂದ ಅನುಮತಿ ಕೇಳಿದೆ.

ಬೂಸ್ಟರ್ ಡೋಸ್: ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಅನುಮತಿ ಕೋರಿಕೆ
ಕೋವಿಡ್-19 ಲಸಿಕೆ
Published On :

ಹೈದರಾಬಾದ್: ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3 ನೇ ಹಂತದ ಪ್ರಯೋಗಕ್ಕೆ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ದಿಂದ ಅನುಮತಿ ಕೇಳಿದೆ. 

ಇಂಟ್ರಾನೇಸಲ್ (ಬಿಬಿವಿ154) ಕೋವಿಡ್-19 ಲಸಿಕೆಯನ್ನು ಕೊರೋನಾ ವಿರುದ್ಧ ಬೂಸ್ಟರ್ ಡೋಸ್ ನ್ನಾಗಿ ಬಳಕೆ ಮಾಡಲು ಸಂಸ್ಥೆ ಉದ್ದೇಶಿಸಿದೆ. "ಅನುಮತಿ ಕೇಳಿ ಮನವಿ ಸಲ್ಲಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ, ಇಂಟ್ರಾನೇಸಲ್ ಲಸಿಕೆಯನ್ನು ಈಗಾಗಲೇ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರುವವರಿಗೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. 

ಬೂಸ್ಟರ್ ಡೋಸ್ ನ್ನಾಗಿ ಇಂಟ್ರಾನೇಸಲ್ ನೀಡುವುದರಿಂದ ಸಾಮೂಹಿಕ ಲಸಿಕೆ ಅಭಿಯಾನಕ್ಕೆ ಸಹಕಾರಿಯಾಗಲಿದ್ದು, ರೋಗ ಹರಡುವಿಕೆ ತಡೆಗಟ್ಟುವುದು ಸಾಧ್ಯವಾಗಲಿದೆ. ಎರಡನೇ ಹಂತದ ಪ್ರಯೋಗ ಈಗಾಗಲೇ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. 

ಇಂಟ್ರಾ ಮಸ್ಕ್ಯುಲರ್ ಹಾಗೂ ನೇಸಲ್ ಸಂಯೋಜನೆಯಿಂದ ಈ ಲಸಿಕೆಯನ್ನು ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಇದೇ ವೇಳೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ ಭಾರತ್ ಬಯೋಟೆಕ್ ನ ಲಸಿಕೆ ಕೋವ್ಯಾಕ್ಸಿನ್ ನ ಬಳಕೆಯ ಅವಧಿಯ ಮಿತಿಯನ್ನು ಉತ್ಪಾದನೆಯ ದಿನಾಂಕದಿಂದ 12 ತಿಂಗಳಿಗೆ ಏರಿಕೆ ಮಾಡಿದೆ. ಕೋವ್ಯಾಕ್ಸಿನ್ ನ ಮೊದಲ ಡೋಸ್ ಪಡೆದ 28 ದಿನಗಳಲ್ಲಿ ಎರಡನೇ ಡೋಸ್ ಪಡೆಯಬೇಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.