ಹೆಚ್ಚಿದ ಅಂತರ: ಬೇಸತ್ತು ಪ್ರೀತಿಸಿದ ಯುವಕನ ಮೇಲೆ ಯುವತಿಯಿಂದ ಗುಂಡಿನ ದಾಳಿ!
22 ವರ್ಷದ ಯುವತಿಯೊಬ್ಬಳು ತನ್ನ ನಾಲ್ಕು ವರ್ಷಗಳ ಬಾಯ್ ಫ್ರೆಂಡ್‌ನ ಮೇಲೆ ಗುಂಡು ಹಾರಿಸಿದ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ನಡೆದಿದೆ.

ಬರ್ಧಮಾನ್: 22 ವರ್ಷದ ಯುವತಿಯೊಬ್ಬಳು ತನ್ನ ನಾಲ್ಕು ವರ್ಷಗಳ ಬಾಯ್ ಫ್ರೆಂಡ್‌ನ ಮೇಲೆ ಗುಂಡು ಹಾರಿಸಿದ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ ಕಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಲಸದ ನಿಮಿತ್ತ ಜಾರ್ಖಾಂಡ್'ಗೆ ತೆರಳಿದ್ದೆ. ಮರಳಿ ಊರಿಗೆ ಬಂದಾಗ ಭೇಟಿ ಮಾಡಬೇಕೆಂದು ಹೇಳಿದ ನನ್ನ ಗೆಳತಿ ಸರ್ಕಸ್ ಮೈದಾನಕ್ಕೆ ಬರುವಂತೆ ತಿಳಿಸಿದ್ದಳು.
ಈ ವೇಳೆ ಸ್ಥಳಕ್ಕೆ ಹೋದಾಗ ತಬ್ಬಿಕೊಂಡು, ಪ್ರೀತಿಯಿಂದ ಚುಂಬಿಸಿದ್ದಳು. ಇಬ್ಬರೂ ಸಿಗರೇಡ್ ಸೇದಿದ್ದೆವು. ಬಳಿಕ ನನ್ನ ತಳ್ಳಿದ ಆಕೆ ಇದ್ದಕ್ಕಿದ್ದಂತೆಯೇ ಪಿಸ್ತೂಲು ತೆಗೆದು ಗುಂಡಿನ ದಾಳಿ ನಡೆಸಿದರು ಎಂದು ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾನೆ.
ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ವೇಳೆ ಯುವಕ ಕೂಗಾಡಿದ್ದು, ಹೆದರಿದ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆಂದು ತಿಳಿದುಬಂದಿದೆ.
ಘಟನೆ ಬಳಿಕ ದೂರು ದಾಖಲಿಸಿಕೊಂಡಿರುವ ಪೊಲೀಸರು ಯುವತಿಯನ್ನು ಬಂಧನಕ್ಕೊಳಪಡಿಸಿದ್ದು, ಪಿಸ್ತೂಲು ಹಾಗೂ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಇಬ್ಬರ ನಡುವೆ ಅಂತರ ತೀವ್ರಗೊಂಡ ಹಿನ್ನೆಲೆಯಲ್ಲಿ ಬೇಸತ್ತು ಯುವತಿ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


