ದೇಶ

ಚೆನ್ನೈ: ರಜನಿಕಾಂತ್ ಮನೆಗೆ ವಿಕೆ ಶಶಿಕಲಾ ಭೇಟಿ; ಕುತೂಹಲಕ್ಕೆ ಎಡೆ!

ಇತ್ತೀಚೆಗಷ್ಟೇ ತಮಿಳುನಾಡು ರಾಜಕೀಯಕ್ಕೆ ಹಿಂದಿರುಗಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ಅವರು ಇಂದು ಸೂಪರ್ ಸ್ಚಾರ್ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಚೆನ್ನೈ: ರಜನಿಕಾಂತ್ ಮನೆಗೆ ವಿಕೆ ಶಶಿಕಲಾ ಭೇಟಿ; ಕುತೂಹಲಕ್ಕೆ ಎಡೆ!
ವಿಕೆ ಶಶಿಕಲಾ ಮತ್ತು ರಜನಿಕಾಂತ್
Published On :

ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡು ರಾಜಕೀಯಕ್ಕೆ ಹಿಂದಿರುಗಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ಅವರು ಇಂದು ಸೂಪರ್ ಸ್ಚಾರ್ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. 

ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ರಜನಿಕಾಂತ್ ನಿವಾಸಕ್ಕೆ ವಿಕೆ ಶಶಿಕಲಾ ಅವರು ಭೇಟಿ ನೀಡಿದ್ದು, ಅವರನ್ನು ರಜನಿಕಾಂತ್ ಮತ್ತು ಲತಾ ದಂಪತಿಗಳು ಸ್ವಾಗತಿಸಿದರು. 

ಸುಮಾರು ಅರ್ಧ ಗಂಟೆಗೂ ಅಧಿಕಕಾಲ ನಡೆದ ಸಭೆಯಲ್ಲಿ ರಜನಿಕಾಂತ್ ಮತ್ತು ವಿಕೆ ಶಶಿಕಲಾ ಸಾಕಷ್ಟು ವಿಚಾರವಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಇತ್ತೀಚೆಗೆ ರಜನಿಕಾಂತ್ ಅವರಿಗೆ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಲಭಿಸಿದ ಕುರಿತು ಶಶಿಕಲಾ ಶುಭಕೋರಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ರಜನಿ ಅವರ ಆರೋಗ್ಯ ಮತ್ತು ಸಿನಿಮಾಗಳ ಕುರಿತು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಸೂಪರ್‌ಸ್ಟಾರ್ ಕ್ಯಾರೊಟಾಯ್ಡ್ ರಿವಾಸ್ಕುಲರೈಸೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತರಾಗಿದ್ದ ಶಶಿಕಲಾ, ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಬೆಂಗಳೂರಿನ ಜೈಲಿನಿಂದ ಬಿಡುಗಡೆಯಾಗಿದ್ದರು. ಬಳಿಕ ಸಕ್ರಿಯ ರಾಜಕಾರಣಕ್ಕೆ ಮರಳಲು ಅವರು ಯತ್ನಿಸಿದರಾದರೂ, ಸೆಪ್ಟೆಂಬರ್ 2017 ರಲ್ಲಿ ಶಶಿಕಲಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥೆಯಿಂದ ಔಪಚಾರಿಕವಾಗಿ ತೆಗೆದುಹಾಕಲಾಯಿತು. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.