ದೇಶ

ಓಮಿಕ್ರಾನ್ ಹೊರತಾಗಿಯೂ ದೇಶದಲ್ಲಿ ಹೊಸದಾಗಿ ಕೇವಲ 6,822 ಕೋವಿಡ್-19 ಪ್ರಕರಣ ಪತ್ತೆ

ಓಮಿಕ್ರಾನ್ ಹೊರತಾಗಿಯೂ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,822 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಕಳೆದ 558 ದಿನಗಳಲ್ಲಿ ದೇಶದಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಅತಿ ಕಡಿಮೆ ಸಂಖ್ಯೆ ಇದಾಗಿದೆ.

ಓಮಿಕ್ರಾನ್ ಹೊರತಾಗಿಯೂ ದೇಶದಲ್ಲಿ ಹೊಸದಾಗಿ ಕೇವಲ 6,822 ಕೋವಿಡ್-19 ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಓಮಿಕ್ರಾನ್ ಹೊರತಾಗಿಯೂ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6,822 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ. ಕಳೆದ 558 ದಿನಗಳಲ್ಲಿ ದೇಶದಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಅತಿ ಕಡಿಮೆ ಸಂಖ್ಯೆ ಇದಾಗಿದೆ.  

ಕಳೆದ 24 ಗಂಟೆಗಳಲ್ಲಿ ಪತ್ತೆಯಾದ 6,822 ಹೊಸ ಪ್ರಕರಣಗಳ ಪೈಕಿ 3,277 ಹೊಸ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದೆ. ಆದಾಗ್ಯೂ, ದೇಶದಲ್ಲಿ ಸದ್ಯ ಪ್ರಸ್ತುತ ಪ್ರಕರಣಗಳ ಸಂಖ್ಯೆ 95, 014ಕ್ಕೆ ತಲುಪಿದೆ. ಇದು ಕಳೆದ 554 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪ್ರಕಾರ, ದೇಶದಲ್ಲಿ ಸಕ್ರಿಯ ಪ್ಕಕರಣಗಳ ಸಂಖ್ಯೆ ಒಟ್ಟಾರೇ ಸಂಖ್ಯೆಯಲ್ಲಿ ಶೇಕಡಾ 1ಕ್ಕಿಂತಲೂ ಕಡಿಮೆಯಿದೆ. ಪ್ರಸ್ತುತ ಶೇ. 0.27 ರಷ್ಟು ಸಕ್ರಿಯ ಪ್ರಕರಣಗಳಿವೆ. 

ಕಳೆದ 24 ಗಂಟೆಗಳಲ್ಲಿ 10, 004 ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೇ  ಗುಣಮುಖರಾದವರ ಸಂಖ್ಯೆ 3,40,79,612ಕ್ಕೆ ಏರಿಕೆಯಾಗಿದೆ.  ಪ್ರಸ್ತುತ ಚೇತರಿಕೆ ಪ್ರಮಾಣ ಶೇ. 98.36 ರಷ್ಟಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.