ದೇಶ

ಭಾರತ-ರಷ್ಯಾ 21 ನೇ ವಾರ್ಷಿಕ ಶೃಂಗಸಭೆ; ಮೋದಿ-ಪುಟಿನ್ ಮಾತುಕತೆ 

ಭಾರತ-ರಷ್ಯಾ ನಡುವಿನ 21 ನೇ ವಾರ್ಷಿಕ ಶೃಂಗಸಭೆಯ ಭಾಗವಾಗಿ ಡಿ.06 ರಂದು ಪ್ರಧಾನಿ ನರೇಂದ್ರ ಮೋದಿ-ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಭಾರತ-ರಷ್ಯಾ 21 ನೇ ವಾರ್ಷಿಕ ಶೃಂಗಸಭೆ; ಮೋದಿ-ಪುಟಿನ್ ಮಾತುಕತೆ 
ಪುಟಿನ್- ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಭಾರತ-ರಷ್ಯಾ ನಡುವಿನ 21 ನೇ ವಾರ್ಷಿಕ ಶೃಂಗಸಭೆಯ ಭಾಗವಾಗಿ ಡಿ.06 ರಂದು ಪ್ರಧಾನಿ ನರೇಂದ್ರ ಮೋದಿ-ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. 

ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ದ್ವಿಪಕ್ಷೀಯ ಸಭೆ ನಡೆದಿದ್ದು  2019 ರ ಬ್ರಿಕ್ಸ್ ಶೃಂಗಸಭೆಯ ಪಾರ್ಶ್ವದಲ್ಲಿ ಭೇಟಿ ಮಾಡಿದ್ದ ಬಳಿಕ ಮೋದಿ-ಪುಟಿನ್ ಅವರ ಮೊದಲ ಭೇಟಿ ಇದಾಗಿದೆ. ಇದಕ್ಕೂ ಮುನ್ನ ಉಭಯ ನಾಯಕರೂ 6 ದೂರವಾಣಿ ಕರೆಗಳು ಹಾಗೂ ಹಲವು ವರ್ಚ್ಯುಯಲ್ ಶೃಂಗಸಭೆಗಳಲ್ಲಿ ಭಾಗಿಯಾಗಿದ್ದರು. 

ಇದಕ್ಕೂ ಮುನ್ನ 2+2 ಸಚಿವರ ದ್ವಿಪಕ್ಷೀಯ ಸಭೆ ನಡೆದಿತ್ತು. ಭಾರತಕ್ಕೆ ಎಕೆ-203 ಅಸಾಲ್ಟ್ ರೈಫಲ್ ಗಳ ಪೂರೈಕೆಗೆ ಡಿ.06 ರಂದು ಉಭಯ ರಾಷ್ಟ್ರಗಳೂ ಸಹಿ ಹಾಕಿದವು.

ಈ ಪಾಲುದಾರಿಕೆ ಉಭಯ ರಾಷ್ಟ್ರಗಳಿಗೂ ಪ್ರಯೋಜನಕಾರಿಯಾಗಿರಲಿದೆ. ಉಭಯ ದೇಶಗಳ ನಡುವಿನ ವಾಣಿಜ್ಯ, ವ್ಯಾಪಾರ ವಹಿವಾಟುಗಳು ಉತ್ತಮವಾಗಿದೆ. ಇಂಧನ, ನಾವಿನ್ಯತೆ, ಬಾಹ್ಯಾಕಾಶ ಹಾಗೂ ಕೋವಿಡ್-19 ಲಸಿಕೆ ಉತ್ಪಾದನೆ, ಔಷಧ ಉತ್ಪಾದನೆ ಕ್ಷೇತ್ರದಲ್ಲಿ ಒಪ್ಪಂದಗಳು ಸಕ್ರಿಯವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಪುಟಿನ್ ಹೇಳಿದ್ದಾರೆ. 
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.