ದೇಶ

ಒಪ್ಪಿಗೆಯಿಲ್ಲದವನ ಜೊತೆ ಮದುವೆ: ಮಗನ ಸಹಾಯ ಪಡೆದು ಮಗಳ ತಲೆಯನ್ನೇ ಕತ್ತರಿಸಿದ ತಾಯಿ!

ಮನೆಯವರ ಒಪ್ಪಿಗೆಯಿಲ್ಲದೆ ವ್ಯಕ್ತಿಯನ್ನು ಮದುವೆಯಾದ ಯುವತಿಯ ಶಿರಚ್ಛೇದ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಆಕೆಯ ಕಿರಿಯ ಸೋದರ ತಾಯಿಯ ಸಹಾಯದಿಂದಲೇ ಹತ್ಯೆ ಮಾಡಿದ್ದಾನೆ.

ಒಪ್ಪಿಗೆಯಿಲ್ಲದವನ ಜೊತೆ ಮದುವೆ: ಮಗನ ಸಹಾಯ ಪಡೆದು ಮಗಳ ತಲೆಯನ್ನೇ ಕತ್ತರಿಸಿದ ತಾಯಿ!
ಸಾಂದರ್ಭಿಕ ಚಿತ್ರ
Published On :

ಮುಂಬೈ: ಮನೆಯವರ ಒಪ್ಪಿಗೆಯಿಲ್ಲದೆ ವ್ಯಕ್ತಿಯನ್ನು ಮದುವೆಯಾದ ಯುವತಿಯ ಶಿರಚ್ಛೇದ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಆಕೆಯ ಕಿರಿಯ ಸೋದರ ತಾಯಿಯ ಸಹಾಯದಿಂದಲೇ ಹತ್ಯೆ ಮಾಡಿದ್ದಾನೆ. 

ಮಗ ಮದುವೆಯಾಗಿ ಹೋದ ಗಂಡನ ಮನೆಯಲ್ಲಿಯೇ ನಿನ್ನೆ ಈ ಭೀಕರ ಕೃತ್ಯ ನಡೆಸಿದ್ದಲ್ಲದೆ, ಕೊಲೆ ಮಾಡಿದ ನಂತರ ಯುವತಿಯ ಸೋದರ ಮತ್ತು ತಾಯಿ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ಸುತ್ತಮುತ್ತಲಿದ್ದವರಿಗೆ ತೋರಿಸಿ ಅದರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಆರೋಪಿ ತಾಯಿಯನ್ನು 38 ವರ್ಷದ ಶೋಭಾ ಸಂಜಯ್ ಮೊಟೆ ಮತ್ತು ಆಕೆಯ ಪುತ್ರ 18 ವರ್ಷದ ಸಂಕೇತ್ ಸಂಜಯ್ ಮೊಟೆ ಎಂದು ಗುರುತಿಸಲಾಗಿದ್ದು 19 ವರ್ಷದ ಮಗಳು ತಮ್ಮ ಒಪ್ಪಿಗೆಯಿಲ್ಲದವನ ಜೊತೆ ಮದುವೆಯಾಗುತ್ತಿರುವುದಕ್ಕೆ ಈ ರಾಕ್ಷಸಿ ಕೃತ್ಯವೆಸಗಿದ್ದಾರೆ.

ಯುವತಿ ಗಂಡನ ಮನೆಯಲ್ಲಿ ಚಹಾ ತಯಾರಿಸುತ್ತಿದ್ದಳು. ನಿನ್ನೆ ತಾಯಿ-ಮಗ ಲಡ್ಗೌನ್ ನಲ್ಲಿರುವ ಆಕೆಯ ಮನೆಗೆ ಏಕಾಏಕಿ ಹೋಗಿ ತಾಯಿ ಕಾಲನ್ನು ಹಿಡಿದರೆ ಸೋದರೆ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ತಂದಿದ್ದ ಕತ್ತಿಯಿಂದ ಕುತ್ತಿಗೆ ಕತ್ತರಿಸಿಯೇ ಬಿಟ್ಟರು. ಕಡಿದ ಶಿರವನ್ನು ಹಿಡಿದು ಊರವರಿಗೆಲ್ಲಾ ತೋರಿಸುತ್ತಾ ಕೊನೆಗೆ ವಿರ್ಗೌನ್ ಪೊಲೀಸ್ ಠಾಣೆಗೆ ಹೋಗಿ ಶರಣಾದರು.

ಇದೊಂದು ಪೂರ್ವಸಂಚಿನ ಕೊಲೆಯಾಗಿದ್ದು ಇದಕ್ಕೂ ಮೊದಲೇ ಒಂದೆರಡು ಬಾರಿ ತಾಯಿ-ಮಗ ಹೋಗಿ ಮಗಳನ್ನು ಹತ್ಯೆ ಮಾಡಲು ಯತ್ನಿಸಿದ್ದರು. ಪತ್ನಿಯನ್ನು ಕೊಲೆ ಮಾಡುತ್ತಿದ್ದಾಗ ಅರಚುವುದು ಕೇಳಿ ಪತಿ ಕೂಡಲೇ ಧಾವಿಸಿ ತಡೆಯಲು ಮುಂದಾದಾಗ ಮಗ ಆತನನ್ನು ಸಹ ಕತ್ತಿಯಲ್ಲಿ ಹಲ್ಲೆ ಮಾಡಲು ಮುಂದಾದ. ಆಗ ಆತ ತಪ್ಪಿಸಿಕೊಂಡನು. 

ತಮಗೆ ಒಪ್ಪಿಗೆಯಿಲ್ಲದವನ ಜೊತೆ ಮಗಳು ಮದುವೆ ಮಾಡಿಕೊಂಡು ಸಮಾಜದಲ್ಲಿ ತಾವು ತಲೆತಗ್ಗಿಸುವಂತೆ ಮಾಡಿದ್ದಾಳೆ ಎಂದು ತಾಯಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.