ದೇಶ

ವಯಸ್ಕ ಜನಸಂಖ್ಯೆಯ ಶೇ.50 ರಷ್ಟು ಮಂದಿಗೆ ಪೂರ್ಣ ಲಸಿಕೆ; ಒಟ್ಟು 127.61 ಕೋಟಿ ಲಸಿಕೆ ನೀಡಿಕೆ

ಭಾರತದ ಅರ್ಹ ವಯಸ್ಕ ಜನಸಂಖ್ಯೆಯ ಶೇ.50 ರಷ್ಟು ಮಂದಿಗೆ ಕೋವಿಡ್-19 ಲಸಿಕೆಯನ್ನು ಪೂರ್ಣಪ್ರಮಾಣದಲ್ಲಿ (2 ಡೋಸ್) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ.

ವಯಸ್ಕ ಜನಸಂಖ್ಯೆಯ ಶೇ.50 ರಷ್ಟು ಮಂದಿಗೆ ಪೂರ್ಣ ಲಸಿಕೆ; ಒಟ್ಟು 127.61 ಕೋಟಿ ಲಸಿಕೆ ನೀಡಿಕೆ
ಕೋವಿಡ್-19 ಲಸಿಕೆ
Published On :

ನವದೆಹಲಿ: ಭಾರತದ ಅರ್ಹ ವಯಸ್ಕ ಜನಸಂಖ್ಯೆಯ ಶೇ.50 ರಷ್ಟು ಮಂದಿಗೆ ಕೋವಿಡ್-19 ಲಸಿಕೆಯನ್ನು ಪೂರ್ಣಪ್ರಮಾಣದಲ್ಲಿ (2 ಡೋಸ್) ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ. 

ಒಟ್ಟು ಲಸಿಕೆ ನೀಡಿರುವ ಸಂಖ್ಯೆ 127.61 ಕೋಟಿಯನ್ನು ದಾಟಿದ್ದು, ಈ ಮೂಲಕ ಭಾರತದಲ್ಲಿ ಮೊದಲ ಡೋಸ್ ಲಸಿಕೆಯನ್ನು ಶೇ.84.8 ರಷ್ಟು ವಯಸ್ಕ ಮಂದಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
 
ಅಭಿನಂದನೆಗಳು ಭಾರತ. ದೇಶದ ಅರ್ಧದಷ್ಟು ಅರ್ಹ ಜನಸಂಖ್ಯೆಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಜೊತೆಯಾಗಿ ಜಯಗಳಿಸುತ್ತೇವೆ ಎಂದು ಟ್ವೀಟ್ ನಲ್ಲಿ ಮಾಂಡವೀಯ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.